ಹುಲಿ ಕಾದಾಟಕ್ಕೆ ಹೃತಿಕ್ ತಯಾರಿ

ಅಶುತೋಷ್ ಗೋವಾರಿಕರ್ ನಿರ್ದೇಶಿಸುತ್ತಿರುವ ‘ಮೊಹೆಂಜೊ ದಾರೊ’ ಚಿತ್ರದಲ್ಲಿ ಬಾಲಿವುಡ್ ಸೂಪರ್ ಹೀರೊ ಹೃತಿಕ್ ರೋಷನ್ ಹುಲಿಯೊಂದಿಗೆ ಸೆಣಸಾಡಲಿದ್ದಾರೆ. ಈ ದೃಶ್ಯದ ಸಿದ್ಧತೆಗಾಗಿ ಸೆಲೆಬ್ರಿಟಿಗಳ ಫಿಟ್ನೆಸ್ ತರಬೇತುದಾರ ಸತ್ಯಜಿತ್ ಚೌರಾಸಿಯಾ ಹೃತಿಕ್ಗೆ ತರಬೇತಿ ನೀಡಿವುದರಲ್ಲ್ಲಿ ಬ್ಯುಸಿ ಆಗಿದ್ದಾರೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ತಿಳಿಸಿದೆ.
‘ಮೊಹೆಂಜೊ ದಾರೊ ಚಿತ್ರದ ಸ್ಕ್ರಿಪ್ಟ್ ಬಹಳ ಚೆನ್ನಾಗಿದೆ. ಈ ಕುರಿತು ನನ್ನ ಸ್ನೇಹಿತ ಹೃತಿಕ್ ತಮ್ಮ ಪಾತ್ರಕ್ಕೆ ಅವಶ್ಯಕವಿರುವ ದೇಹಾಕೃತಿ ಬಗ್ಗೆ ಹೇಳಿದ್ದರು. ಹೃತಿಕ್ ಹುಲಿಯ ಎದುರು ಕಾದಾಡುವ ಕೆಲವು ದೃಶ್ಯಗಳನ್ನೂ ಈ ಚಿತ್ರದಲ್ಲಿ ಕಾಣಬಹುದು. ಇಂತಹ ದೃಶ್ಯಗಳಿಗೆ ಒಗ್ಗುವ ದೇಹಾಕಾರವನ್ನು ರೂಪಿಸಿಕೊಳ್ಳಲು ಅವರಿಗೆ ನಾನು ತರಬೇತಿ ನೀಡುತ್ತಿದ್ದೇನೆ’ ಎಂದು ಸತ್ಯಜಿತ್ ಐಎಎನ್ಎಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ಮೊಹೆಂಜೊ ದಾರೊ ಚಿತ್ರಕ್ಕಾಗಿ ಹೃತಿಕ್ ತಮ್ಮ ದೇಹವನ್ನು ಬಹಳಷ್ಟು ದಂಡಿಸಿದ್ದಾರೆ. ತೆರೆಯ ಮೇಲೆ ಅವರು ನಿಭಾಯಿಸುತ್ತಿರುವ ಪಾತ್ರದಲ್ಲಿ ಪರಿಪೂರ್ಣತೆ ಕಾಣಬಹುದು. ಅಂತೆಯೇ ಹೃತಿಕ್ ಅವರಿಗೂ ವರ್ಕ್ಔಟ್ಸ್ ಅಂದರೆ ತುಂಬಾ ಇಷ್ಟ’ ಎಂದು ಸತ್ಯಜಿತ್ ತಿಳಿಸಿದ್ದಾರೆ.
‘ಗಜಿನಿ’ ಚಿತ್ರಕ್ಕಾಗಿ ಅಮೀರ್ ಖಾನ್ ಅವರ ದೇಹವನ್ನು 8 ಪ್ಯಾಕ್ ಮಾಡಿಸಿದ್ದ ಕೀರ್ತಿ ಇದೇ ಸತ್ಯಜಿತ್ ಅವರಿಗೆ ಸಲ್ಲುತ್ತದೆ. ರಾಣಿ ಮುಖರ್ಜಿ, ಕರೀನಾ ಕಪೂರ್, ಇಶಾ ಡಿಯೋಲ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ತರಬೇತುಗೊಳಿಸಿದವರು ಈ ಸತ್ಯಜಿತ್. ಸಿಂಧು ನಾಗರಿಕತೆ ಕಾಲದ ವಿಭಿನ್ನ ಪ್ರೇಮಕಥೆಯಾದ ‘ಮೊಹೊಂಜೊದಾರೊ’ ಚಿತ್ರವನ್ನು ಗುಜರಾತ್ನ ಕಛ್ ಜಿಲ್ಲೆಯ ಭುಜ್ನಲ್ಲಿ ಚಿತ್ರೀಕರಿಸಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.