ಶನಿವಾರ, ಜೂನ್ 19, 2021
27 °C

ಹುಲಿ ಯೋಜನೆ ಪುನರ್ ಪರಿಶೀಲನೆ: ಆಸ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ವನ್ಯಜೀವಿ ಸಂರಕ್ಷಣೆಯಷ್ಟೇ ಜನರ ಬದುಕು ಕೂಡ ಮುಖ್ಯ. ಜನಜೀವನ ರಕ್ಷಣೆ ಅಗತ್ಯತೆ ಗಮನದಲ್ಲಿಟ್ಟುಕೊಂಡು ಹುಲಿ ಸಂರಕ್ಷಣಾ ಯೋಜನೆ ಮರು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿ ಯೋಜನೆ ಜಾರಿಗೊಳಿಸುವ ಸಂದರ್ಭ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬ ಅರಿವು ಇರಲಿಲ್ಲ. ಯೋಜನೆ ಜಾರಿಯಾದರೆ ಈ ಭಾಗದಲ್ಲಿ ಎದುರಾಗಲಿರುವ ಸಮಸ್ಯೆ ಬಗ್ಗೆ ಸ್ಥಳೀಯರು ಗಮನಕ್ಕೆ ತಂದಿದ್ದಾರೆ.ಜನರನ್ನು ಸಂತ್ರಸ್ತಗೊಳಿಸಿ ಯೋಜನೆ ಜಾರಿ ಮಾಡಲಾಗದು. ಕೇಂದ್ರ ಅರಣ್ಯ ಸಚಿವರಿಗೂ ಯೋಜನ ಸಾಧಕ-ಬಾಧಕಗಳ ಅರಿಕೆ ಮಾಡಲಾಗಿದೆ. ಯೋಜನೆ ಪುನರ್ ಪರಿಶೀಲಿಸಲು ಮನವಿ ಮಾಡಲಾಗಿದೆ. ಕೇಂದ್ರಸರ್ಕಾರ ಜನಹಿತ ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಲಿದೆ ಎಂದರು.ರಸಗೊಬ್ಬರ ದರ ಹೆಚ್ಚಳಗೊಂಡಿರುವ ಬಗ್ಗೆ ಗಮನ ಸೆಳೆದಾಗ, ರಸಗೊಬ್ಬರಕ್ಕೆ ಸಬ್ಸಿಡಿ ನೀಡುವಂತೆ ಫೆಡರೇಷನ್‌ನಿಂದ ಕೇಂದ್ರಕ್ಕೆ ಪ್ರಸ್ತಾವನೆ ಹೋಗಿದೆ. ಇದಕ್ಕೆ ಕೇಂದ್ರ ಸರಿಯಾದ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಹೇಳಿದರು.ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರದ ಕ್ರಮವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆಹಾರ ಪದಾರ್ಥಗಳ ಬೆಲೆ ತೀರಾ ಕೆಳಮಟ್ಟಕ್ಕೆ ಇಳಿದಿವೆ. ಇನ್ನೂ ಪೆಟ್ರೋಲ್ ಉತ್ಪನ್ನ ದರ ಅಂತರರಾಷ್ಟ್ರೀಯ ಮಾರುಕಟ್ಟೆ ಏರಿಳಿತ ಅವಲಂಬಿಸಿದೆ ಎಂದು ಅವರು ಸಮಜಾಯಿಷಿ ನೀಡಿದರು.ಯಗಟಿಪುರ ರಥೋತ್ಸವ ಇಂದಿನಿಂದಕಡೂರು: ತಾಲ್ಲೂಕಿನ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರದಿಂದ ಇದೇ 7ರವರೆಗೆ ನಡೆಯಲಿದೆ. ಪ್ರತಿ ವರ್ಷದ ಫಾಲ್ಗುಣ ಮಾಸದ ಶುದ್ಧ ಮಘಾ ನಕ್ಷತ್ರ ದಿನ ಜರುಗುವ ಮಲ್ಲಿಕಾರ್ಜುನಸ್ವಾಮಿ ಮಹಾರಥೋತ್ಸವ ಐದು ದಿನ ವಿಜೃಂಭಣೆಯಿಂದ ನಡೆಯುತ್ತದೆ.ಇದೇ 7 ರಂದು ಮಹಾರಥೋತ್ಸವವ ನಡೆಯಲಿದ್ದು, ವೃಷಭ ವಾಹನೋತ್ಸವ, ಸರ್ಪ ವಾಹನೋತ್ಸವ, ಗಿರಿಜಾ ಕಲ್ಯಾಣ, ಗಜಾರೋಹಣೋತ್ಸವ, ವೀರಗಾಸೆ, ನೃತ್ಯ ರಸಮಂಜರಿ ಏರ್ಪಡಿಸಲಾಗಿದೆ. ಬೀರೂರು, ಕಡೂರು, ಪಂಚನಹಳ್ಳಿ, ಬಾಣಾವರ,ಹೊಸದುರ್ಗಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.