ಸೋಮವಾರ, ಜನವರಿ 20, 2020
29 °C

ಹುಲಿ ರಾಷ್ಟ್ರೀಯ ಗಣತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ವನ್ಯಜೀವಿಧಾಮ ಸೇರಿದಂತೆ ಸುಮಾರು 50ಸಾವಿರ ಎಕರೆ ಪ್ರದೇಶದ ಕಾಡಿನಲ್ಲಿ 2013–14ನೇ ಸಾಲಿನ ಹುಲಿ ಹಾಗೂ ವನ್ಯಜೀವಿಗಳ ರಾಷ್ಟ್ರೀಯ ಗಣತಿ  ಕಾರ್ಯ ಸೋಮವಾರ ಶುರುವಾಗಿದೆ.ವನ್ಯಜೀವಿ ಧಾಮದ ಕುಸ್ರಂಪಳ್ಳಿ, ಐನೋಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ಚಿಂಚೋಳಿ, ಶಾದಿಪುರ, ಚಿಕ್ಕಲಿಂಗದಳ್ಳಿ, ಸೋಮಲಿಂಗದಳ್ಳಿ, ಕಲಭಾವಿ, ಕೊಂಚಾ­­ವರಂ, ಮೊಗದಂಪುರ, ಸಂಗಾ­ಪುರ, ಧರ್ಮಾಸಾಗರ, ವೆಂಕಟಾಪುರ, ಅಂತಾವರಂ ಮತ್ತು ಪಂಗರಗಾದ ಅರಣ್ಯ ರಕ್ಷಕರ ಕೇಂದ್ರ(ಬೀಟ್‌)ದ ವ್ಯಾಪ್ತಿಯಲ್ಲಿ ಪ್ರತಿ ಬೀಟ್‌ಗೆ 3 ಸಿಬ್ಬಂದಿಯಂತೆ 50 ಮಂದಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.ಸೋಮವಾರ ಎಸಿಎಫ್‌ ದಯಾನಂದ­­ಕುಮಾರ ಹಾಗೂ ಆರ್‌ಎಫ್‌ಒ  ಎಂ.ಎಲ್‌.ಬಾವಿಕಟ್ಟಿ ವಿವಿಧ ಬೀಟ್‌ಗೆ ತೆರಳಿ ಗಣತಿಗೆ ಮಾಡಿಕೊಂಡ ಸಿದ್ಧತೆ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.ಸೋಮವಾರ, ಮಂಗಳವಾರ ಸಿದ್ಧತೆ, ಬುಧವಾರದಿಂದ ಶುಕ್ರವಾರ­ದವರೆಗೆ ಪ್ರತಿದಿನ 5ಕಿ.ಮೀ. ಪ್ರಾಣಿಗಳ ವಾಸಯೋಗ್ಯ ಪ್ರದೇಶದಲ್ಲಿ ಸೂಕ್ಷ್ಮ ನಡಿಗೆ ಮತ್ತು ಶನಿವಾರದಿಂದ ಸೋಮವಾರ­ದವರೆಗೆ ಟ್ರಾಂಜೆಂಟ್‌ ಲೈನ್‌ನಲ್ಲಿ 2 ಕಿ.ಮೀ ಉದ್ದದಲ್ಲಿ ಮತ್ತು ವೃತ್ತ ಹಾಗೂ ಗೊತ್ತು ಪಡಿಸಿದ ಸ್ಥಳಗಳಲ್ಲಿ ದೊರೆಯುವ ಕಾಡು­ಪ್ರಾಣಿಗಳ ಚಲನವಲನದ ಕುರು­ಹುಗಳು, ಹೆಜ್ಜೆಗುರುತು, ಹಿಕ್ಕೆಗಳು, ಮೂಳೆಗಳು, ಸತ್ತಪ್ರಾಣಿಯ ಅಸ್ಥಿಪಂಜರ, ಕಾಡಿನ ವಿವಿಧ ಗಿಡಗಳು, ಚಂಡಿ ಕತ್ತರಿಸಿದ ಗಿಡಗಳು, ಕಾಡಿನ ದಟ್ಟಣೆ, ವಿವಿಧ ಸಾದಾ ಸಸ್ಯಗಳು, ಔಷಧಿ ಸಸ್ಯಗಳು, ಒಣಹುಲ್ಲು, ಹಸಿ­ಹುಲ್ಲುಗಳ ಎಲೆಗಳ ವಿವರ ದಾಖಲಿಸಲಾಗುತ್ತದೆ.ನಿವೃತ್ತ ವಲಯ ಅರಣ್ಯಾಧಿಕಾರಿ ಯುನುಸ್‌ಅಲಿ, ಉಪ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ವೀರೇಂದ್ರ, ಹಣಮಂತ­ರಾಯ ಬಿರಾದಾರ, ಮಹೇಶ ಕನಕಟ್ಟ, ಅಶೋಕ ಮೊದಲಾದವರು ಇದ್ದರು.

ಪ್ರತಿಕ್ರಿಯಿಸಿ (+)