ಮಂಗಳವಾರ, ಏಪ್ರಿಲ್ 13, 2021
32 °C

ಹುಲ್ಲತ್ತಿ: ಕುಡಿಯುವ ನೀರಿಗಾಗಿ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಬೇಸಿಗೆ ಆರಂಭವಾಗು ತ್ತಿದ್ದಂತೆ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ಹೆಚ್ಚುತ್ತಿದೆ. ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕರೆಂಟಿಗಾಗಿ ಕಾಯಬೇಕಾಗಿರುವುದು ನಿತ್ಯದ ಸ್ಥಿತಿ. ಕರೆಂಟ್ ಬರುತ್ತಿದ್ದಂತೆ ನೀರಿಗಾಗಿ ನೂಕುನುಗ್ಗಲು ಮಾಮೂಲು!ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಅನೇಕ ಕೊಳವೆ ಬಾವಿಗಳಿವೆ. ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆ ಹಾಗೂ ಅಂತರ್ಜಲ ವೃದ್ಧಿಗೆ ಕೈಗೊಂಡ ಕ್ರಮಗಳ ಕಾರಣದಿಂದಾಗಿ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಿದೆ. ಆದರೆ ಇದರ ಸಂಗ್ರಹಕ್ಕೆ ಮೇಲ್ಮಟ್ಟದ ಜಲಾಗಾರ ಇಲ್ಲದೇ ಇರುವುದರಿಂದ ಕರೆಂಟ್ ಇದ್ದಾಗ ಮಾತ್ರ ಜನತೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳ ಬೇಕಾದ ಅನಿವಾರ್ಯತೆ ಇದೆ.ಒಂದೆರಡು ದಿನ ವಿದ್ಯುತ್ ಕೈಕೊಟ್ಟರೆ ನೀರಿಗಾಗಿ ಹಾಹಾಕಾರವೇ ಉಂಟಾಗುತ್ತದೆ. ಪ್ರತಿ ಮನೆಯವರು ಮಹಿಳೆಯರು, ಮಕ್ಕಳು ಎಂಬ ಭೇದವಿಲ್ಲದೇ ನೀರಿಗಾಗಿ ಸರದಿಯಲ್ಲಿ ನಿಲ್ಲುವ ಸ್ಥಿತಿ ಎದುರಾಗುತ್ತದೆ. ಕಾರಣ ಮೇಲ್ಮಟ್ಟದ ಜಲಾಗಾರ ಸ್ಥಾಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.