ಸೋಮವಾರ, ಜನವರಿ 20, 2020
19 °C

ಹುಸಿಯಾದ ಬಾಂಬ್‌ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಐಎಎನ್‌ಎಸ್‌): ಬಾಂಬ್‌ ಇಡಲಾಗಿದೆ ಎಂಬ ಬೆದರಿಕೆಯಿಂದ ಆತಂಕಕ್ಕೆ ಒಳಗಾಗಿದ್ದ ಹಾರ್ವರ್ಡ್ ವಿಶ್ವ ವಿದ್ಯಾಲಯದ ಆವರಣದಲ್ಲಿ ಈಗ ಸಹಜ ಸ್ಥಿತಿ ನೆಲೆಸಿದೆ.ವಿಶ್ವವಿದ್ಯಾಲಯದ ಇಡೀ ಆವರಣವನ್ನು ತಪಾಸಣೆ ನಡೆಸಿದ ನಂತರ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದರಿಂದ ಆತಂಕ ದೂರವಾಗಿದೆ. ಇದ ರಿಂದಾಗಿ ವಿಶ್ವವಿದ್ಯಾಲಯದಲ್ಲಿ ಎಂದಿನಂತೆ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ.

ಪ್ರತಿಕ್ರಿಯಿಸಿ (+)