ಸೋಮವಾರ, ಡಿಸೆಂಬರ್ 16, 2019
17 °C

ಹುಸೇನ್ ನಾಮಪತ್ರ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಉತ್ತರ ಮತಕ್ಷೇತ್ರಕ್ಕೆ ಕೆಜೆಪಿಯಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದು, `ಬಿ ಫಾರಂ' ಅಸಲು ಪ್ರತಿ ಜಾಗಕ್ಕೆ ನಕಲು ಪ್ರತಿ ಸೇರ್ಪಡೆಗೊಂಡಿದ್ದರಿಂದ ಗೊಂದಲ ಉಂಟಾಗಿತ್ತು. ಆದರೆ ಶುಕ್ರವಾರ ಮತ್ತೆ `ಬಿ ಫಾರಂ' ಅಸಲು ಪ್ರತಿ ಒಪ್ಪಿಸಿದ್ದರಿಂದ ನಾಮಪತ್ರ ಅಂಗೀಕಾರಗೊಂಡಿದೆ ಎಂದು ಕೆಜೆಪಿ ಅಭ್ಯರ್ಥಿ ನಾಸೀರ್ ಹುಸೇನ ಉಸ್ತಾದ ತಿಳಿಸಿದರು.`15ರಂದೇ ನಾಮಪತ್ರದೊಂದಿಗೆ ಅಸಲು ಬಿ ಫಾರಂ ಸಲ್ಲಿಸಿ ಚೆಕ್‌ಲಿಸ್ಟ್ ಪಡೆದುಕೊಂಡಿದ್ದೆ. 16ಕ್ಕೆ ಬೆಂಬಲಿಗರೊಂದಿಗೆ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದೆ. ಮಹಾನಗರ ಪಾಲಿಕೆಯಲ್ಲಿ ಸುಮಾರು 25 ವರ್ಷಗಳಿಂದ ಹಿಡಿತ ಸಾಧಿಸಿರುವ ಶಾಸಕ ಖಮರುಲ್ ಇಸ್ಲಾಂ ಅವರು ಸೋಲಿನ ಭಯದಿಂದಾಗಿ ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್‌ರಂತೆ ಕೆಲಸ ಮಾಡಿದ್ದು, ಅಸಲು ಪ್ರತಿ ಜಾಗಕ್ಕೆ ನಕಲು ಸೇರ್ಪಡೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ಸಲ್ಲಿಸಿದ್ದೇನೆ' ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.ಕೆಜೆಪಿಯ ಅಧಿಕೃತ ಅಭ್ಯರ್ಥಿಯೆಂದು ಚುನಾವಣಾಧಿಕಾರಿಗಳು ಘೋಷಿಸಿರುವುದರಿಂದ ತಮಗೆ ಅತೀವ ಸಂತೋಷವಾಗಿದ್ದು, ಎದುರಾಳಿಯ ಕುತಂತ್ರಕ್ಕೆ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬಸವರಾಜ ಇಂಗಿನ್, ಶರಣಬಸಪ್ಪ ಕಾಡಾದಿ ಇದ್ದರು.

ನಾಮಪತ್ರ ಪ್ರಕರಣ: ಸಿಬಿಐಗೆ ಒಪ್ಪಿಸಿ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಸೋಲಿನ ಭೀತಿಯಿಂದಾಗಿ ನಮ್ಮ ಪಕ್ಷದ ಅಭ್ಯರ್ಥಿಯ ಅಸಲು ನಾಮಪತ್ರವನ್ನು ನಾಪತ್ತೆ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಪ್ರಕರಣವನ್ನು ಸಿಒಡಿ ಇಲ್ಲವೇ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕೆಜೆಪಿ ರಾಜ್ಯ ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ ಆಗ್ರಹಿಸಿದರು.ತಪ್ಪಿತಸ್ಥ ಅಧಿಕಾರಿಗಳನ್ನು ಕೇವಲ ಅಮಾನತುಗೊಳಿಸದೆ ಅವರನ್ನು ಜೈಲಿಗೆ ಕಳುಹಿಸಬೇಕು. ಶಾಸಕ ಖಮರುಲ್ ಇಸ್ಲಾಂ ಅವರು ಈ ರೀತಿಯ ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯಬಾರದಿತ್ತು ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)