ಬುಧವಾರ, ನವೆಂಬರ್ 13, 2019
21 °C

ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕೋಟ್ಯಧಿಪತಿಗಳು

Published:
Updated:

ಧಾರವಾಡ: ಕಳೆದ ಬಾರಿಯಂತೆ ಈ ಬಾರಿಯೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಕೆಲವು ಮಂದಿ ಕೋಟ್ಯಧೀಶರಿದ್ದಾರೆ.ಮಾಜಿ ಸಚಿವ ಕಾಂಗ್ರೆಸ್‌ನ ಎಸ್.ಆರ್.ಮೋರೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ಜನ್ಮತಳೆದ ಲೋಕಸತ್ತಾ ಪಕ್ಷದಿಂದ ಸ್ಪರ್ಧಿಸಿರುವ ನಾಗರಾಜ ತಿಗಡಿ ಮಂಗಳವಾರ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ್ದು, ಇಬ್ಬರೂ ಕೋಟಿ ಲೆಕ್ಕದ ಗಡಿ ದಾಟಿದವರು.ಎಸ್.ಆರ್.ಮೋರೆ ಅವರ ಚರಾಸ್ತಿಯ ಒಟ್ಟು ಮೌಲ್ಯ 1 ಕೋಟಿ 5 ಲಕ್ಷ ರೂಪಾಯಿ. ಸ್ಥಿರಾಸ್ತಿ 4.3 ಕೋಟಿ. ಕೈಯಲ್ಲಿ 3.6 ಲಕ್ಷ ನಗದು ಹೊಂದಿದ್ದು, ಬೆಂಗಳೂರಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ರೂ 37.39 ಲಕ್ಷ, ಅದೇ ಶಾಖೆಯಲ್ಲಿ ರೂ21.65 ಲಕ್ಷ ಠೇವಣಿ ಇಟ್ಟಿದ್ದಾರೆ. ಧಾರವಾಡದ ಸಿಂಡಿಕೇಟ್ ಬ್ಯಾಂಕ್‌ನ ಜಂಟಿ ಖಾತೆಯಲ್ಲಿ ರೂ20.42 ಲಕ್ಷ ಹಾಗೂ ರೂ 10 ಲಕ್ಷ ರೂಪಾಯಿ ಅಲ್ಪಾವಧಿ ಠೇವಣಿಯನ್ನು ಇಟ್ಟಿದ್ದಾರೆ. ಉಳಿತಾಯ ಖಾತೆಯಲ್ಲಿ ರೂ 8.5 ಲಕ್ಷ ಹಣ ಹೊಂದಿದ್ದಾರೆ. ಮೋರೆ ಹಾಗೂ ಅವರ ಪತ್ನಿ ಶೈಲಾ ಅವರ ಹೆಸರಿನಲ್ಲಿ ಅಂಚೆ ಇಲಾಖೆಯ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ 2 ಲಕ್ಷ ತೊಡಗಿಸಿದ್ದಾರೆ. ರೂ 5 ಲಕ್ಷ ಬೆಲೆಬಾಳುವ ಫೋರ್ಡ್ ಫಿಯೆಸ್ಟಾ ಕಾರು, ರೂ22.44 ಲಕ್ಷ ಬೆಲೆಬಾಳುವ 800 ಗ್ರಾಂ ಚಿನ್ನ, 2 ಲಕ್ಷ ಮೌಲ್ಯದ 4 ಕೆಜಿ ಬೆಳ್ಳಿ ಅವರ ಬಳಿ ಇವೆ. ಧಾರವಾಡದ ಗುಲಗಂಜಿಕೊಪ್ಪದ ಐದು ಕಡೆ ಕುಟುಂಬ ಸದಸ್ಯರ ಹೆಸರಿನಲ್ಲಿ ಒಟ್ಟು ರೂ94 ಲಕ್ಷ ಮೌಲ್ಯದ ಕೃಷಿ ಭೂಮಿ, ರೂ 70 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಇದೆ. ಬೆಂಗಳೂರಿನ ಅಲಿ ಅಸ್ಗರ್ ರಸ್ತೆಯ ಎಂಬೆಸ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಅವರ ತಾಯಿ ಬರೆದ ಉಯಿಲಿನ ಮೇರೆಗೆ ಬಂದ 1.5 ಕೋಟಿ ಮೌಲ್ಯದ ಮನೆ, ಬೆಳಗಾವಿ ರಸ್ತೆಯ ಮೋರೆ ಫಾರ್ಮ್ಸ್‌ನಲ್ಲಿ ಕ್ರಮವಾಗಿ 30, 25, 25 ಲಕ್ಷ ಬೆಲೆಬಾಳುವ ಮನೆಗಳು ಜಂಟಿ ಒಡೆತನದಲ್ಲಿವೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಹಾಗೂ ಪುಣೆಯ ಬನೇರ ಗ್ರಾಮದಲ್ಲಿ ತಲಾ 1 ಕೋಟಿ ಮೌಲ್ಯದ ನಿವೇಶನಗಳಿವೆ.ನಾಗರಾಜ ತಿಗಡಿ

ಲೋಕಸತ್ತಾ ಪಕ್ಷದ ನಾಗರಾಜ ತಿಗಡಿ ಸಹ ಕೋಟ್ಯಧೀಶರೇ. 12.21 ಲಕ್ಷ ಚರಾಸ್ತಿ ನಾಗರಾಜ ಅವರ ಹೆಸರಿನಲ್ಲಿದ್ದರೆ, ಪತ್ನಿಯ ಹೆಸರಿನಲ್ಲಿ 14.6 ಲಕ್ಷ ಇದೆ. 7 ಲಕ್ಷ ಮೌಲ್ಯದ ಸ್ಕಾರ್ಪಿಯೊ, 2.35 ಲಕ್ಷ ಮೌಲ್ಯದ ವ್ಯಾಗನ್ ಆರ್ ಕಾರು, ಹೋಂಡಾ ಶೈನ್ ಬೈಕ್ ಇದೆ. 1.30 ಲಕ್ಷ ಮೊತ್ತದ ಎರಡು ಕೆಜಿ ಬೆಳ್ಳಿ ಅವರ ಬಳಿ ಇದ್ದರೆ, ಪತ್ನಿಯ ಬಳಿ 14 ಲಕ್ಷ ಮೌಲ್ಯದ 730 ಗ್ರಾಂ ಚಿನ್ನದ ಒಡವೆಗಳಿವೆ.ಬೆಳಗಾವಿಯ ಕಾಡೋಳಿಯಲ್ಲಿ 9.5 ಲಕ್ಷ ಮೌಲ್ಯದ ಕೃಷಿ ಭೂಮಿ ನಾಗರಾಜ ಅವರ ಹೆಸರಿನಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಮಾಳಾಪುರದಲ್ಲಿ 35.5 ಲಕ್ಷ ಬೆಲೆಬಾಳುವ ಕೃಷಿ ಭೂಮಿ ಪತ್ನಿಯ ಒಡೆತನದಲ್ಲಿದೆ. ಧಾರವಾಡದ ಕಲ್ಯಾಣ ನಗರದಲ್ಲಿ ಕ್ರಮವಾಗಿ 24.80 ಲಕ್ಷ, 20.80 ಲಕ್ಷದ ಮನೆಗಳು ಪತಿ, ಪತ್ನಿಯ ಹೆಸರಿನಲ್ಲಿವೆ. ಸಪ್ತಾಪುರದ ನಿರ್ಮಲ ನಗರದಲ್ಲಿ 1.65 ಕೋಟಿ ಬೆಲೆಬಾಳುವ ಮನೆ ನಾಗರಾಜ ಹೆಸರಿನಲ್ಲಿದ್ದರೆ, 21 ಲಕ್ಷ ಬೆಲೆಬಾಳುವ ಮನೆ ಪತ್ನಿಯ ಹೆಸರಿನಲ್ಲಿದೆ.ಒಟ್ಟಾರೆ ಅಭ್ಯರ್ಥಿಯ ಹೆಸರಿನಲ್ಲಿ ಸ್ಥಿರಾಸ್ತಿ 2.64 ಕೋಟಿ ಇದ್ದರೆ ಪತ್ನಿಯ ಹೆಸರಿನಲ್ಲಿ 81.90 ಲಕ್ಷ ಇದೆ.ಜೆಡಿಎಸ್ ಬಂಡಾಯ ಅಭ್ಯರ್ಥಿ ಈಶ್ವರ ಸಾಣಿಕೊಪ್ಪ 29.75 ಲಕ್ಷ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿದ್ದು, ಅವರ ಪತ್ನಿ 30 ಲಕ್ಷದ ಆಸ್ತಿಯನ್ನು ಹೊಂದಿದ್ದಾರೆ. 7.5 ಲಕ್ಷ ಮೌಲ್ಯದ ಡೈಕೊರಾ ಕಾರು ಹಾಗೂ ಹೋಂಡಾ ಟ್ವಿಸ್ಟರ್ ಬೈಕ್ ಇದೆ. ಕೆವಿಜಿ ಬ್ಯಾಂಕ್‌ನ ಶಿವಾನಂದ ನಗರ ಶಾಖೆಯಲ್ಲಿ 10 ಲಕ್ಷ ರೂಪಾಯಿ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ 2.5 ಲಕ್ಷ ಸಾಲ ಬಾಕಿ ಇದೆ.

ಪ್ರತಿಕ್ರಿಯಿಸಿ (+)