ಶುಕ್ರವಾರ, ಮೇ 14, 2021
21 °C

ಹೂಡಿಕೆಗೆ ಸುರಕ್ಷಿತ ಸ್ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಮುಂಬರುವ ವರ್ಷಗಳಲ್ಲಿ ಗರಿಷ್ಠ ಆರ್ಥಿಕ ಪ್ರಗತಿ ದಾಖಲಿಸಿದರೆ, ಸದ್ಯ ಆರ್ಥಿಕ ಅಸ್ಥಿರತೆಯಿಂದ ಚಂಚಲಗೊಂಡಿರುವ ಜಾಗತಿಕ ಬಂಡವಾಳಕ್ಕೆ ಭಾರತವು `ಸುರಕ್ಷಿತ ಹೂಡಿಕೆಯ ಸ್ವರ್ಗ~ವಾಗಲಿದೆ ಎಂದು  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬಣ್ಣಿಸಿದ್ದಾರೆ.ಗರಿಷ್ಠ ಪ್ರಮಾಣದಲ್ಲಿ ವೃದ್ಧಿ ದರ ಕಾಯ್ದುಕೊಂಡರೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸದೃಢತೆಕಾಯ್ದುಕೊಂಡರೆ, ತಲ್ಲಣಗೊಂಡಿರುವ ಜಾಗತಿಕ ಬಂಡವಾಳಕ್ಕೆ ಭಾರತ ಸುರಕ್ಷಿತ ತಾಣವಾಗಲಿದೆ. ಅಮೆರಿಕದ ಸಾಲ ಯೋಗ್ಯತೆ ಮಟ್ಟ ಕುಸಿದಿರುವುದು ಸೇರಿದಂತೆ ಸದ್ಯದ ಜಾಗತಿಕ ಬೆಳವಣಿಗೆಗಳು ದೇಶದ ಆರ್ಥಿಕತೆಗೆ ಲಾಭ ತರಲಿವೆ ಎಂದು ಹೇಳಿದ್ದಾರೆ.  ಭಾರತೀಯ ಆರ್ಥಿಕ ಸೇವೆಗಳ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶೀಯ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದ್ದು, ಇದು ಜಾಗತಿಕ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆರ್ಥಿಕ ಸುಧಾರಣಾ ಕ್ರಮಗಳಿಂದ  ಕೈಗಾರಿಕೆ ಮತ್ತು ತಯಾರಿಕೆ ಕ್ಷೇತ್ರದ ಗರಿಷ್ಠ ಪ್ರಗತಿ ನಿರೀಕ್ಷಿಸಲಾಗಿದೆ. ಸುಸ್ಥಿರ ಆರ್ಥಿಕ ಪ್ರಗತಿ ಸಾಧಿಸಲು ಅಗತ್ಯ ಕ್ರಮಗಳನ್ನು ಸರ್ಕರ ಕೈಗೊಳ್ಳಲಿದೆ ಎಂದರು.`ದೇಶದ ವಿಶಾಲವಾದ ಆರ್ಥಿಕತೆಯ  ಪ್ರತಿಯೊಂದು ಸಂಗತಿಗಳನ್ನೂ ನಿಭಾಯಿಸಲು, ಸರ್ಕಾರಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಹೂಡಿಕೆದಾರರನ್ನು ಸಬಲೀಕರಣಗೊಳಿಸುವುದು ಮತ್ತು ಸ್ವ-ಸಹಾಯದ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡುವ ಪಾತ್ರವನ್ನು ಸರ್ಕಾರ ಯಶಸ್ವಿಯಾಗಿ ನಿರ್ವಹಿಸುತ್ತಿದೆ  ಎಂದರು.1990ರ ನಂತರ ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ದೇಶದ ಆರ್ಥಿಕತೆ ಹೆಚ್ಚು ಉದಾರೀಕರಣಗೊಂಡಿತು. ಇದರ ಫಲವಾಗಿ ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಮಹತ್ವದ ಬದಲಾವಣೆಗಳಾದವು ಎಂದರು.ಮುಂಬರುವ ವರ್ಷಗಳಲ್ಲಿ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಮತ್ತು ಸದೃಢ ಆರ್ಥಿಕ ತಾಣವಾಗಿ ರೂಪುಗೊಳ್ಳಲಿದೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡಿರುವ ಈ ಹೊತ್ತಿನಲ್ಲಿ ಭಾರತವು ಹೊಸ ಭರವಸೆ ಮೂಡಿಸಿದೆ. ಜಾಗತಿಕ ಆರ್ಥಿಕ ಹಿಂಜರಿಕೆ ಕಾಲದಲ್ಲೂ ದೇಶವು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿತ್ತು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.