ಹೂಡಿಕೆಯಲ್ಲಿ ಭಾರತಕ್ಕೆ ಆದ್ಯತೆ: ಸಮೀಕ್ಷೆ

7

ಹೂಡಿಕೆಯಲ್ಲಿ ಭಾರತಕ್ಕೆ ಆದ್ಯತೆ: ಸಮೀಕ್ಷೆ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಏಷ್ಯಾದ ಅತ್ಯುತ್ತಮ ಹೂಡಿಕೆ ತಾಣವಾಗಿ ಭಾರತ ರೂಪುಗೊಳ್ಳುತ್ತಿದ್ದು, ಅಭಿವೃದ್ಧಿ ಹೊಂದಿದ ಹಲವು ದೇಶಗಳು ಭಾರತದಲ್ಲಿ ಬಂಡವಾಳ ತೊಡಗಿಸಲು ಆಸಕ್ತಿ ತೋರಿಸಿವೆ ಎಂದು ಅಮೆರಿಕ ಮೂಲದ ಸಂಸ್ಥೆಯೊಂದು ಇತ್ತೀಚೆಗೆ ನಡೆಸಿದ  ಅಧ್ಯಯನ ತಿಳಿಸಿದೆ.ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಸೇರಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳು ಆರ್ಥಿಕತೆಗೆ ಉತ್ತೇಜನ ನೀಡಿದೆ.  ಮೂಲಸೌಕರ್ಯ ವಲಯದಲ್ಲಿನ ಪ್ರಗತಿ ಕೂಡ ಭಾರಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ ಎಂದು ಅಮೆರಿಕ-ಭಾರತ ಅಂತರರಾಷ್ಟ್ರೀಯ ಆರ್ಥಿಕ ನೀತಿ ನಿರೂಪಣೆ ಅಧ್ಯಯನ ಕೇಂದ್ರ (ಸಿಎಸ್‌ಐಎಸ್) ಹೇಳಿದೆ.ಭಾರತದ ಸುಸ್ಥಿರ ಆರ್ಥಿಕ ಪ್ರಗತಿಗೆ `ಸಿಎಸ್‌ಐಎಸ್' ಹಲವು ಸಲಹೆಗಳನ್ನೂ ಮುಂದಿಟ್ಟಿದೆ.  ಭವಿಷ್ಯದಲ್ಲಿ ಭಾರತ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸವಾಲು ಎದುರಿಸಬೇಕಾಗುತ್ತದೆ. ಜತೆಗೆ  ಮೂಲಸೌಕರ್ಯ ಅಭಿವೃದ್ಧಿ ಕೇವಲ ಮೆಟ್ರೊ ನಗರಗಳಿಗೆ ಮಾತ್ರ ಸೀಮಿತವಾಗಿದ್ದು, ಎರಡು ಮತ್ತು ಮೂರನೆಯ ಹಂತದ ನಗರಗಳಿಗೆ ವಿಸ್ತರಿಸಬೇಕು ಎಂದಿದೆ.  `ಮೂಲಸೌಕರ್ಯ ಅಭಿವೃದ್ಧಿಯನ್ನು ಸರ್ಕಾರ ಮೊದಲ ಆದ್ಯತೆಯಾಗಿ ಪರಿಗಣಿಬೇಕು ಎನ್ನುವುದು `ಸಿಎಸ್‌ಐಎಸ್' ಆಗ್ರಹ.`ರಾಷ್ಟ್ರೀಯ ತಯಾರಿಕಾ ನೀತಿ'ಯ ಮೂಲಕ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ತಯಾರಿಕಾ ವಲಯದ ಕೊಡುಗೆಯನ್ನು ಈಗಿನ ಶೇ 16ರಿಂದ ಶೇ 25ಕ್ಕೆ ಹೆಚ್ಚಿಸುವ ಗುರಿ ಸರ್ಕಾರ ಹೊಂದಿದೆ. ಈ ಮೂಲಕ 100 ದಶಲಕ್ಷ ಹೊಸ ಉದ್ಯೋಗಾವಕಾಶ ಸೃಷ್ಟಿ ಅಂದಾಜು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry