ಹೂಡಿಕೆ: ಕೋಲ್ಕತ್ತಾದಲ್ಲಿ ಪ್ರಚಾರ

7

ಹೂಡಿಕೆ: ಕೋಲ್ಕತ್ತಾದಲ್ಲಿ ಪ್ರಚಾರ

Published:
Updated:
ಹೂಡಿಕೆ: ಕೋಲ್ಕತ್ತಾದಲ್ಲಿ ಪ್ರಚಾರ

ಬೆಂಗಳೂರು:ಜೂನ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ವಾಣಿಜ್ಯೋದ್ಯಮಿಗಳನ್ನು ಆಕರ್ಷಿಸಲು ರಾಜ್ಯ ಬೃಹತ್ ಕೈಗಾರಿಕೆ ಇಲಾಖೆ ಕೋಲ್ಕತ್ತಾದಲ್ಲಿ ಇತ್ತೀಚೆಗೆ ರೋಡ್ ಶೋ ಆಯೋಜಿಸಿತ್ತು.ಜೂನ್7 ಮತ್ತು 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಆಕರ್ಷಿಸುವುದು ಹಾಗೂ ಒಟ್ಟು 10 ಲಕ್ಷ ಉದ್ಯೋಗಗಳ ಸೃಷ್ಟಿ ಸರ್ಕಾರದ ಗುರಿ. ರಾಜ್ಯದ ಬಂಡವಾಳ ಹೂಡಿಕೆ ಸ್ನೇಹಿ ನೀತಿಯ ಪರಿಚಯ ಮಾಡಿಕೊಡುವುದು, ವಿವಿಧ ಕಂಪೆನಿಗಳನ್ನು ಒಂದೇ ವೇದಿಕೆಯಡಿ ಸೇರಿಸುವುದೂ ಸರ್ಕಾರದ ಆಶಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.ಕೋಲ್ಕತ್ತಾದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು. `ಅಸೋಚಾಂ~ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ಕ್ಷೇತ್ರದ 120ಕ್ಕೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಎಂ. ಮಹೇಶ್ವರ ರಾವ್, ಟಾಟಾ ಸ್ಟೀಲ್‌ನ ಉಪಾಧ್ಯಕ್ಷ ಪಾರ್ಥಸೇನ ಗುಪ್ತ ಮತ್ತಿತರರು ಪಾಲ್ಗೊಂಡಿದ್ದರು. ಟಾಟಾ ಸ್ಟೀಲ್ ಸಂಸ್ಥೆ ್ಙ15 ಸಾವಿರ ಕೋಟಿ ಬಂಡವಾಳ ತೊಡಗಿಸಿ, ಹಾವೇರಿಯಲ್ಲಿ 3 ದಶಲಕ್ಷ ಟನ್ ಸಾಮರ್ಥ್ಯದ ಏಕೀಕೃತ ಉಕ್ಕು ತಯಾರಿಕಾ ಘಟಕ ಆರಂಭಿಸಲಿದೆ ಎಂದು ಪಾರ್ಥಸೇನ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry