ಹೂಡಿಕೆ ಪರಿಣಾಮ ಚಿನ್ನದ ಬೆಲೆ ಏರಿಕೆ

7

ಹೂಡಿಕೆ ಪರಿಣಾಮ ಚಿನ್ನದ ಬೆಲೆ ಏರಿಕೆ

Published:
Updated:

ನವದೆಹಲಿ(ಪಿಟಿಐ): ಹಬ್ಬದ ಖರೀದಿ ಮತ್ತು ಹೂಡಿಕೆ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಚಿನ್ನದ ಧಾರಣೆ ಬುಧವಾರ ಇಲ್ಲಿ 10 ಗ್ರಾಂಗೆ ರೂ230ರಷ್ಟು ಏರಿಕೆಯಾಗಿ, ರೂ31,750ಕ್ಕೆ ತಲುಪಿತು. ಕೈಗಾರಿಕಾ  ಕ್ಷೇತ್ರದ ಬೇಡಿಕೆ ಕುಸಿದ ಕಾರಣ ಬೆಳ್ಳಿ ಧಾರಣೆ ಕೆ.ಜಿ.ಗೆ ರೂ450ರಷ್ಟು ತಗ್ಗಿ ರೂ61,000ಕ್ಕೆ ಬಂದಿತು.`ಇಟಿಎಫ್~ ದಾಖಲೆ

ಚಿನ್ನದ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ `ಗೋಲ್ಡ್  ಇಟಿಎಫ್~ ಮೌಲ್ಯ  ಸಾರ್ವಕಾಲಿಕ ದಾಖಲೆ ಮಟ್ಟ ರೂ11,198 ಕೋಟಿಗೆ ಏರಿಕೆ ಕಂಡಿದೆ. ಸದ್ಯ ದೇಶದಲ್ಲಿ 14 ಮ್ಯೂಚುವಲ್ ಫಂಡ್ ಸಂಸ್ಥೆಗಳು 25ಕ್ಕೂ ಹೆಚ್ಚು `ಗೋಲ್ಡ್ ಇಟಿಎಫ್~ ಯೋಜನೆಗಳನ್ನು ನಿರ್ವಹಿಸುತ್ತಿವೆ. ಚಿನ್ನದ ಬೆಲೆ ಹೆಚ್ಚಿದ ನಂತರ ಕಳೆದ 3 ತಿಂಗಳಲ್ಲಿ ಇಟಿಎಫ್ ಯೋಜನೆಗೆ ರೂ500 ಕೋಟಿ ಹೂಡಿಕೆ ಹರಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry