ಹೂಡಿಕೆ ಭಾರತಕ್ಕೆ ಪ್ರಾಶಸ್ತ್ಯ: ಮಾರಿಷಸ್
ನವದೆಹಲಿ (ಪಿಟಿಐ): ಜಾಗತಿಕ ಬಂಡವಾಳ ಹೂಡಿಕೆ ವಿಷಯದಲ್ಲಿ ಭಾರತ ನಮಗೆ ಮೊದಲ ಪ್ರಾಶಸ್ತ್ಯದ ಪಾಲುದಾರ ದೇಶ. ತೆರಿಗೆ ಮಾಹಿತಿ ವಿನಿಮಯದಲ್ಲೂ ಉಭಯ ದೇಶಗಳ ನಡುವೆ ಅನ್ಯೋನ್ಯ ಸಂಬಂಧವಿದೆ ಎಂದು ಮಾರಿಷಸ್ ಹೇಳಿದೆ.
ಭಾರತಕ್ಕೆ ಹರಿದು ಬರುವ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್ಐಐ)ಯ ಮೂರನೇ ಒಂದು ಭಾಗ ಮಾರಿಷಸ್ ಮೂಲಕವೇ ಬರುತ್ತದೆ.
`ಭಾರತ ಮತ್ತು ಮಾರಿಷಸ್ ನಡುವೆ ಎರಡೂ ಬದಿಯಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದ (ಡಿಟಿಎಎ) ಆಗಿದೆ. ಹಾಗಾಗಿ ಹಲವು ಜಾಗತಿಕ ಹೂಡಿಕೆದಾರರು ಮಾರಿಷಸ್ ಮೂಲಕವೇ ಭಾರತದ ಷೇರುಪೇಟೆಯಲ್ಲಿ ಬಂಡವಾಳ ತೊಡಗಿಸುತ್ತಿದ್ದಾರೆ' ಎಂದು ಮಾರಿಷಸ್ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕ್ಲಾರೆಟ್ ಅಹೆನ್ ಬುಧವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
`ಹೊಸ ತೆರಿಗೆ ಮಾಹಿತಿ ವಿನಿಮಯ ಒಪ್ಪಂದ'ಕ್ಕೆ ಎರಡೂ ದೇಶಗಳು ಬದ್ಧವಾಗಿವೆ. ಆದರೂ, ತೆರಿಗೆ ವಂಚಿಸಿ ಭಾರತದಿಂದ ಮಾರಿಷಸ್ಗೆ ಮತ್ತು ಮಾರಿಷಸ್ನಿಂದ ಭಾರತಕ್ಕೆ ಬರುವ ಕಪ್ಪುಹಣದ ಬಗ್ಗೆ ತೀವ್ರ ಎಚ್ಚರಿಕೆ ವಹಿಸಲಾಗುತ್ತಿದೆ. ಇದು ವಿಶೇಷ ನಿಬಂಧನೆಗೂ ಒಳಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.