ಭಾನುವಾರ, ಏಪ್ರಿಲ್ 11, 2021
22 °C

ಹೂಡಿಕೆ ಸಲಹೆಗಾರರಿಗೂ ಸೆಬಿ ನಿಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮ್ಯೂಚುವಲ್ ಫಂಡ್ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಗುರುವಾರ ಹೊಸ ನಿಯಮಗಳನ್ನು ಪ್ರಕಟಿಸಿದ್ದು, `ಹೂಡಿಕೆ ಸಲಹೆಗಾರರು~ ಕೂಡ ಈ ನಿಯಮದ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೇಳಿದೆ.`ಶುಲ್ಕ ಪಡೆದು ಹೂಡಿಕೆ ಬಗ್ಗೆ ಸಲಹೆ ನೀಡುವ ಸಲಹೆಗಾರರು `ಸೆಬಿ~ ನಿಯಮಗಳ ವ್ಯಾಪ್ತಿಗೆ ಬರಲಿದ್ದಾರೆ. ಆದರೆ, ಉಚಿತವಾಗಿ ಮಾಧ್ಯಮಗಳ ಮೂಲಕ ಅಥವಾ ಸಾರ್ವಜನಿಕವಾಗಿ ಹೂಡಿಕೆ ಸಲಹೆ ನೀಡುವವರಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ ಎಂದು `ಸೆಬಿ~ ಅಧ್ಯಕ್ಷ ಯು.ಕೆ.ಸಿನ್ಹಾ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ) ನೀಡಿದ ಸಲಹೆಗಳನ್ನು ಆಧರಿಸಿ `ಹೂಡಿಕೆ ಸಲಹೆಗಾರರ ನಿಯಮಗಳು  -2012~ ಜಾರಿಗೆ ತರಲಾಗಿದೆ. ಶುಲ್ಕ ಪಡೆದು ಸಲಹೆ ನೀಡುವವರನ್ನು ನಿಯಂತ್ರಿಸುವುದೇ ಇದರ ಮುಖ್ಯ ಉದ್ದೇಶ. ಇಂತಹ ಸಂಸ್ಥೆ ಅಥವಾ ವ್ಯಕ್ತಿಗಳು `ಸೆಬಿ~ಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ.  `ಹಣಕಾಸು  ಯೋಜಕ~ರನ್ನು ಸಹ `ಹೂಡಿಕೆ ಸಲಹೆಗಾರರು~ ಎಂದು ಪರಿಗಣಿಸಲಾಗುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.ಬ್ಯಾಂಕುಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಇಂಥ ಹೂಡಿಕೆ ಸಲಹೆ ಅಥವಾ ಸೇವೆಗಳನ್ನು ತಮ್ಮ ಅಂಗಸಂಸ್ಥೆಗಳ ಮೂಲಕ ಅಥವಾ ಪ್ರತ್ಯೇಕ ಘಟಕದ (ಎಸ್‌ಐಡಿಸಿ) ಮೂಲಕ ಪಡೆದುಕೊಳ್ಳಬಹುದು ಎಂದು `ಸೆಬಿ~ ಸ್ಪಷ್ಟಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.