ಶುಕ್ರವಾರ, ಮೇ 27, 2022
24 °C

ಹೂಲಗೇರಿ: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರ ಹರಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೂರ: ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಂಬಿದ ದೇವರಲ್ಲಿ ಭಕ್ತರು ವಿವಿಧ ಬಗೆಯ ಹರಕೆ ತೀರಿಸುವುದು ಇಂದಿಗೂ ರೂಢಿಯಲ್ಲಿದೆ.ಸಮೀಪದ ಹೂಲಗೇರಿಯ ಸಮರ್ಥ ಬಸವೇಶ್ವರ ಮಹಾರಾಜರ ಜ್ಞಾನ ಯೋಗಾಶ್ರಮದಲ್ಲಿ ಶಿವರಾತ್ರಿ ನಿಮಿತ್ತ ನಡೆದ ಜ್ಞಾನ ಸಪ್ತಾಹ ಕಾರ್ಯಕ್ರಮದ ಸಮಾರೋಪದಲ್ಲಿ ನೂರಾರು ಭಕ್ತಾದಿಗಳು ಜಾನಪದ ಶೈಲಿಯಲ್ಲಿ ‘ಸಕ್ಕಾ ಸರಗಿ’ ನೃತ್ಯ, ಉರುಳಾಟ ಸೇವೆ ಮಾಡಿ ತಮ್ಮ ಇಷ್ಟಾರ್ಥ ಪೂರೈಸಿಕೊಂಡರು.ಬಹುತೇಕ ಮಹಿಳೆಯರೇ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಹುಲಕುಂದದ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಪ್ರವಚನ, ವಿವಿಧ ಧಾರ್ಮಿಕ ವಿಧಿಗಳು ನಡೆದವು. ಗುಳೇದಗುಡ್ಡ ಕಾಡ ಸಿದ್ಧೇಶ್ವರ ಶಿವಯೋಗಿ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಿದ್ದರು. ಹೂಲಗೇರಿ ಜ್ಞಾನಯೋಗಾಶ್ರಮದ ಕಾಡ ಸಿದ್ಧೇಶ್ವರ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.