ಬುಧವಾರ, ನವೆಂಬರ್ 13, 2019
22 °C

ಹೂಲಗೇರಿ: ರಸ್ತೆ ದುರಸ್ತಿಗೆ ಆಗ್ರಹ

Published:
Updated:

ಹನುಮಸಾಗರ: ಸಮೀಪದ ಹೂಲಗೇರಿಯ ಗ್ರಾಮದಿಂದ ಸಾಗುವ ನಾಗೂರ ರಸ್ತೆ ಬಹು ದಿನಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಕೂಡಲೆ ರಸ್ತೆ ದುರಸ್ತಿ ಕಾಮಗಾರಿ ಕೈಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ರಸ್ತೆಯಲ್ಲಿ ಕಲ್ಲುಗಳು ಮೇಲೆದ್ದಿವೆ, ವಾಹನ ಸವಾರರೂ ಬವಣೆ ಪಡುವಂತಾಗಿದ್ದು, ರಾತ್ರಿ ಸಮಯದಲ್ಲಿ ಅಪಘಾತಗಳು ಸಂಭವಿಸಿವೆ, ಈ ಕುರಿತಾಗಿ ಹಲವಾರು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಇಲಾಖೆ ರಸ್ತೆದುರಸ್ತಿಗೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.ಸುಮಾರು 8ಕಿ.ಮೀ. ವರೆಗಿನ ಈ ರಸ್ತೆ ಪುರ್ತಗೇರಿ, ನಾಗೂರ, ಅಂಟರಠಾಣಾ, ಯರಿಗೋನಾಳ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು ಈ ಎಲ್ಲ ಗ್ರಾಮಸ್ಥರು ಇದೆ ರಸ್ತೆಯನ್ನೇ ಅವಲಂಬಿಸಿದ್ದಾರೆ. ಈಗಾಗಲೇ ಬಂಡರಗಲ್‌ನಿಂದ ಹೂಲಗೇರಿವರೆಗಿನ ರಸ್ತೆ ಕಾಮಾಗಾರಿಯಾದಂತೆ ಈ ರಸ್ತೆಯ ದುರಸ್ತಿ ಕಾಮಗಾರಿ ಕೂಡಲೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)