ಶನಿವಾರ, ಜನವರಿ 25, 2020
18 °C

ಹೂಳು ತೆಗೆದರೂ ಕಾಸಿಲ್ಲ: ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಕೊಳ್ಳೂರು ಗ್ರಾಮದಲ್ಲಿ ಹರಿಯುವ ಪೀತನಾಲಾ ಹೂಳು ತೆಗೆದ ಕಾಮಗಾರಿಯ ಬಿಲ್ಲು ನೀಡದೇ ಸತಾಯಿಸುತ್ತಿರುವ ಅಧಿಕಾರಿ­ಗಳ ಧೋರಣೆ ಖಂಡಿಸಿ ಗ್ರಾಮಸ್ಥರೇ ತಾಲ್ಲೂಕು ಪಂಚಾಯಿತಿ  ಎದುರು ಬುಧವಾರ ಧರಣಿ ನಡೆಸಿದರು.‘ಕೊಳ್ಳೂರು ಗ್ರಾಮದ ಮಧ್ಯದಲ್ಲಿ ಹರಿ­ಯುವ ಪೀತನಾಲಾ ಹೂಳು ತುಂಬಿ­ದರೆ ನೀರು ಸಾರ್ವಜನಿಕರ ಮನೆ­ಗಳಿಗೆ ನುಗ್ಗುತ್ತದೆ. ಈ ಕುರಿತು ಅಧಿಕಾ­ರಿ­­ಗಳಿಗೆ ಮನವಿ ಮಾಡಿದರೆ ಹೂಳು ತೆಗೆಯಿರಿ ಎಂದರು. ಈಗ ಹೂಳು ತೆಗೆದರೆ ನಮಗೆ ಹಣ ನೀಡುತ್ತಿಲ್ಲ’ ಎಂದು ಧರಣಿಯ ನೇತೃತ್ವವಹಿಸಿದ್ದ ನಾಗಪ್ಪ ಐನೋಳ್ಳಿ ತಿಳಿಸಿದರು.ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಜಗನ್ನಾಥರೆಡ್ಡಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಮದ್‌ ಬಾರಿ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿ­ಸು­ವುದಾಗಿ ಭರವಸೆ ನೀಡಿದರು.ಧರಣಿಯಲ್ಲಿ ನಾಗಪ್ಪ ಐನೋಳ್ಳಿ, ಖಂಡಪ್ಪ ಸುಗಂಧಿ, ಪಾಂಡಪ್ಪ, ತಿಪ್ಪಣ್ಣ ಹುಗ್ಗೇಳ್ಳಿ, ನರಸಪ್ಪ ಗುತ್ತಿ, ಹಣಮಂತ­ರೆಡ್ಡಿ ಪುರಸೋಣಿ, ಲಾಲಪ್ಪ ತಳ­ವಾರ್‌, ಸುಮಿತ್ರಾಬಾಯಿ ಬಕ್ಕಯ್ಯ, ಲಕ್ಷ್ಮೀ ನರಸಾರೆಡ್ಡಿ ಮೊದಲಾದವರು ಇದ್ದರು.

ಪ್ರತಿಕ್ರಿಯಿಸಿ (+)