ಹೂವಕ್ಕ ಅಧ್ಯಕ್ಷೆ, ಗಣೇಶ ಉಪಾಧ್ಯಕ್ಷ

ಗುರುವಾರ , ಜೂಲೈ 18, 2019
29 °C
ರಾಣೆಬೆನ್ನೂರು ತಾಲ್ಲೂಕು ಪಂಚಾಯ್ತಿಗೆ ಅವಿರೋಧ ಆಯ್ಕೆ

ಹೂವಕ್ಕ ಅಧ್ಯಕ್ಷೆ, ಗಣೇಶ ಉಪಾಧ್ಯಕ್ಷ

Published:
Updated:

ರಾಣೆಬೆನ್ನೂರು: ತಾಲ್ಲೂಕು ಪಂಚಾಯ್ತಿಯ ಎರಡನೇ ಅವಧಿಯ ಉಳಿದ 11 ತಿಂಗಳು ಅಧ್ಯಕ್ಷರಾಗಿ ಬಿಜೆಪಿಯ ಹೂವಕ್ಕ ನಾಗೂರ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಗಣೇಶ ಬಿಲ್ಲಾಳ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗದ್ದವು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ `ಅ' ವರ್ಗಕ್ಕೆ ಮೀಸಲಾಗಿತ್ತು.ಒಟ್ಟು 22 ಸದಸ್ಯ ಬಲದ ತಾಲ್ಲೂಕು ಪಂಚಾಯ್ತಿಯಲ್ಲಿ ಬಿಜೆಪಿ 14 ಹಾಗೂ ಕಾಂಗ್ರೆಸ್ 8 ಸ್ಥಾನಗಳನ್ನು ಹೊಂದಿದ್ದವು. ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸಿ.ಚನ್ನಬಸಪ್ಪ ಹೂವಕ್ಕ ನಾಗೂರ ಹಾಗೂ ಗಣೇಶ ಬಿಲ್ಲಾಳ ಅವರ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.ಬಿಜೆಪಿಯ 14 ಸದಸ್ಯರಲ್ಲಿ 10 ಸದಸ್ಯರು ಕೆಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಹಿಂದಿನ ಅಧ್ಯಕ್ಷರಾಗಿದ್ದ

ಶಾರದಾ ಲಮಾಣಿ  ಹಾಗೂ ಉಪಾಧ್ಯಕ್ಷರಾಗಿದ್ದ ರೇಣುಕಾ ಮಲಕನಹಳ್ಳಿ ಅವರ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಇತ್ತೀಚೆಗೆ ಅವಿಶ್ವಾಸ ಮಂಡಿಸಿ ಅವರನ್ನು ಪದಚುತಿಗೊಳಿಸಿದ್ದರು.ವಿಜಯೋತ್ಸವ: ತಾ.ಪಂಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವರಗುಡ್ಡ ಕ್ಷೇತ್ರದ ಸದಸ್ಯೆ ಹೂವಕ್ಕ ನಾಗೂರ ಹಾಗೂ ಉಪಾಧ್ಯಕ್ಷರಾಗಿ ಮೆಡ್ಲೇರಿ ಕ್ಷೇತ್ರದ ಕಾಂಗ್ರೆಸ್‌ನ ಗಣೇಶ ಬಿಲ್ಲಾಳ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ಪಟಾಕಿ ಹಚ್ಚಿ ಸಂಭ್ರಮಿಸಿದರು. ತಾ.ಪಂ. ಸಿಇಒ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry