ಹೂವಿನಹಡಗಲಿ ಪ್ರತ್ಯೇಕ ಅಪಘಾತ: 12 ಜನ ಸಾವು

7

ಹೂವಿನಹಡಗಲಿ ಪ್ರತ್ಯೇಕ ಅಪಘಾತ: 12 ಜನ ಸಾವು

Published:
Updated:

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ಒಟ್ಟು 12 ಜನರು ಸಾವಿಗೀಡಾಗಿದ್ದಾರೆ. ಮೈಲಾರದ ಬಳಿಯ ತುಂಗಭದ್ರಾ ನದಿಯಲ್ಲಿ ತೆಪ್ಪ ಮಗುಚಿ ಐವರು ಸಾವಿಗೀಡಾ ಗಿದ್ದು, ನಾವಿಕ ಸೇರಿದಂತೆ ಆರು ಜನ ಈಜಿ ದಡ ಸೇರಿದ್ದಾರೆ. ಮೃತರು ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದವರು. 2 ಶವ ದೊರೆತಿದ್ದು, ಮೂವರ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದು ವರಿದಿದೆ.ಇಟ್ಟಗಿ ಗ್ರಾಮದ ಹೊರವಲ ಯದಲ್ಲಿ ಬೆಳಗಿನ ಜಾವ ಸಂಭವಿಸಿದ ಮತ್ತೊಂದು ಪ್ರತ್ಯೇಕ ಅಪಘಾತದಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು   ಟ್ರ್ಯಾಕ್ಸ್ ಮುಖಾ ಮುಖಿ ಡಿಕ್ಕಿ ಹೊಡೆದು ತಿಂಥಣಿ ಮೌನೇಶ್ವರ ಜಾತ್ರೆಗೆ ಹೊರಟಿದ್ದ ದಾವಣಗೆರೆಯ ಏಳು ಜನರು ಮೃತಪಟ್ಟಿದಾರೆ. ಗಾಯ ಗೊಂಡ ಏಳು ಜನರನ್ನು ದಾವಣಗೆರೆ ಆಸ್ಪತ್ರೆಗೆ ಸೇರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry