ಹೂವಿನ ತೋಟದಲ್ಲಿ...

7

ಹೂವಿನ ತೋಟದಲ್ಲಿ...

Published:
Updated:
ಹೂವಿನ ತೋಟದಲ್ಲಿ...

`ಉತ್ತರ ಕರ್ನಾಟಕದಿಂದ ಗುಳೆ ಹೊರಟ ಗುಂಪೊಂದು ರಾಜಧಾನಿ ತಲುಪುತ್ತದೆ. ಅಲ್ಲಿ ಸಂಭವಿಸುವ ಅವಘಡಗಳ ಕೇಂದ್ರಬಿಂದು `ಹೂವಿ~. ಅವಳ ನೋವು, ನಲಿವು, ಅವಳ ಒಳ್ಳೆಯತನ ಹಾಗೂ ಅದರ ದುರುಪಯೋಗದ ಸುತ್ತ ಚಿತ್ರದ ಕತೆ ಸಾಗುತ್ತದೆ~- ಇದು `ಹೂವಿ~ ಚಿತ್ರದ ಬಗ್ಗೆ ನಿರ್ದೇಶಕ ವಿಶಾಲ್ ರಾಜ್ ಹೇಳುವ ಮಾತು.ವಿಶಾಲ್ ರಾಜ್ ಈ ಮೊದಲು `ಶಿವಾನಿ~, `ಮಿಂಚು~ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದವರು. ಇದೀಗ ಡಾ.ಸರಜೂ ಕಾಟ್ಕರ್ ಅವರ `ಹೂವಕ್ಕ~ ಎಂಬ ಕತೆ ಆಧರಿಸಿ `ಹೂವಿ~ ಚಿತ್ರ ರೂಪಿಸುತ್ತಿದ್ದಾರೆ.`ಕತೆ ಹೇಗಿದೆಯೋ ಹಾಗೆಯೇ ಅದನ್ನು ಸಿನಿಮಾ ಮಾಡುವಾಸೆ ನಮ್ಮದು. ಹಳ್ಳಿಯಲ್ಲಿ ಹೂವಕ್ಕ ಆಗಿದ್ದವಳು ಬೆಂಗಳೂರಿಗೆ ಬಂದು ಹೂವಿಯಾಗುತ್ತಾಳೆ. ಅದರಿಂದ ಹೆಸರನ್ನು ಮಾತ್ರ ಬದಲಿಸಿಕೊಂಡಿದ್ದೇವೆ. ಅವಳು ಅನುಭವಿಸುವ ನೋವು ಚಿತ್ರದ ಕಥಾವಸ್ತು. ಈ ಸಿನಿಮಾವನ್ನು ಬ್ರಿಡ್ಜ್ ಸಿನಿಮಾ ಎನ್ನಬಹುದು.ಬೆಳಗಾವಿ ಬಳಿಯ ದೇಸನೂರು ಮತ್ತು ಬೆಂಗಳೂರಿನಲ್ಲಿ 40 ದಿನ ಚಿತ್ರೀಕರಣ ನಡೆಯಲಿದೆ. ಮೂಲ ಕತೆಯನ್ನು ಚಿತ್ರವತ್ತಾಗಿ ಚಿತ್ರೀಕರಿಸಿದ ನಂತರ ಅದಕ್ಕೆ ಕಮರ್ಷಿಯಲ್ ಗುಣಗಳನ್ನು ಲೇಪಿಸುವುದು ನಮ್ಮ ಉದ್ದೇಶ~ ಎಂದು ಮಾಹಿತಿ ನೀಡಿದರು.`ಹೂವಿ~ಯ ಜೊತೆಗಾರ ಸಂತೋಷ್. ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತಾವು ಕಲಿಯುವಾಗ ಮೇಷ್ಟ್ರಾಗಿದ್ದ ನಿರ್ದೇಶಕ ವಿಶಾಲ್ ರಾಜ್ ಅವರ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದನ್ನು ಸಂತಸದಿಂದ ಹಂಚಿಕೊಂಡ ಅವರು, ಈ ಸಿನಿಮಾಗಾಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ಕನ್ನಡ ಮಾತನಾಡುವುದನ್ನು ಅಭ್ಯಾಸ ಮಾಡುತ್ತಿದ್ದಾರಂತೆ.ಉತ್ತರ ಕರ್ನಾಟಕದವರಾದ ಅರುಂಧತಿ ಚಿತ್ರದ ನಿರ್ಮಾಪಕರು. ಕತೆ ಇಷ್ಟವಾದ ಕಾರಣ ಗೆಳತಿಯರೆಲ್ಲಾ ಒಟ್ಟಾಗಿ ಸೇರಿ ಚಿತ್ರ ನಿರ್ಮಿಸುತ್ತಿರುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಗೆ ತಡವಾಗಿ ಬಂದು ಸೇರಿಕೊಂಡರು `ಹೂವಿ~ ಪಾತ್ರಧಾರಿ ಪೂಜಾಗಾಂಧಿ. ದುಬೈನಿಂದ ಇದೀಗ ಬಂದಿದ್ದಕ್ಕೆ ತಡವಾಯಿತು ಎಂದು ಕಾರಣ ಹೇಳಿದ ಅವರಿಗೆ ಚಿತ್ರದ ಕತೆ ವಾಸ್ತವಕ್ಕೆ ಹತ್ತಿರವಾಗಿದೆ ಎನಿಸಿದೆ.`ಈ ಚಿತ್ರವೊಂದು ಪೊಲಿಟಿಕಲ್ ಡ್ರಾಮಾ. ಇಂಥ ಪಾತ್ರಗಳು ಸಮಾಜದಲ್ಲಿ ಬದುಕಿವೆ. ನನಗೆ ಮಹಿಳಾ ಸಂಘಟನೆಗಳ ಒಡನಾಟ ಇರುವುದರಿಂದ ಇಂಥ ಹುಡುಗಿಯರನ್ನು ನೋಡಿರುವೆ. ಮುಗ್ಧ ಮನಸ್ಸಿನ ಹುಡುಗಿಯನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗುತ್ತದೆ. ಇಲ್ಲಿ ಫೈಟರ್ ಪೂಜಾಗಾಂಧಿಯನ್ನು ನೋಡಬಹುದು~ ಎಂದರು.ಪೂಜಾಗೆ `ದಂಡುಪಾಳ್ಯ~ ಚಿತ್ರದ ನಂತರ ಇಷ್ಟವಾದ ಕತೆ ಇದಂತೆ. ಗ್ಲಾಮರ್ ಇಲ್ಲದಿದ್ದರೂ ಪಾತ್ರ ನಿರ್ವಹಣೆ ಸೂಕ್ಷ್ಮವಾಗಿದೆ ಎನಿಸಿದೆ. ಅದರಿಂದ ಪಾತ್ರ ನಿರ್ವಹಿಸಲು ಕಾತರರಾಗಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry