ಗುರುವಾರ , ಜೂನ್ 24, 2021
27 °C

ಹೂವಿನ ಹಡಗಲಿ: ಸಂಭ್ರಮದ ಉರುಸ್ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನ ಹಡಗಲಿ: ಪಟ್ಟಣದಲ್ಲಿ ಸೋಮವಾರ ಸಂಭ್ರಮದಿಂದ ಹಜರತ್ ಸೈಯದ್ ತಾಜ್ದುದೀನ್ ಬಾಬಾ, ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ)ಯ ಉರುಸು ಜರುಗಿತು. ಉರುಸಿನ ಹಿಂದಿನ ರಾತ್ರಿ ದಿನ ಬಹು ನಿರೀಕ್ಷಿತ ಮತ್ತು ಪ್ರಮುಖವಾಗಿ ಪವಾಡವೆನಿಸುವಂತಹ ಗಂಧ ಮಹೋತ್ಸವ ನಡೆಯಿತು.



ಉರುಸಿನ ಪ್ರಯುಕ್ತ ರಾಜ್‌ಬಾಗ್ ಸವಾರ್‌ನಿಗೆ ಭಕ್ತಾದಿಗಳು ಅನೇಕ ರೀತಿಯ ನೈವೇದ್ಯಗಳನ್ನು ಓದಿಕೆ ಮಾಡುವ ಮೂಲಕ ಆಚರಿಸಿ ಸಂಭ್ರಮಿಸುತ್ತಿದ್ದರು. ಹಲವು ಭಕ್ತರು ದೀಡು ನಮಸ್ಕಾರ ಹಾಕುವ ಮೂಲಕ ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತ ಮತ್ತು ಹರಕೆ ತೀರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಭಕ್ತಾದಿಗಳು ಯಮನೂರು ಸ್ವಾಮಿಗೆ ಓದಿಕೆ ಮಾಡಿಸಲು ಮಾದ್ಲಿ, ಅರಿಶಿನ ಕಠ, ಘೋಡಾ, ಸಕ್ಕರೆಯ ಜೊತೆಗೆ ಹಲಗೆ ಬಾರಿಸುತ್ತ ಮತ್ತು ಎತ್ತುಗಳ ಮೆರವಣಿಗೆಯನ್ನು ಮಾಡುತ್ತ ದರ್ಗಾಕ್ಕೆ ಆಗಮಿಸಿದರು.



ದರ್ಗಾದ ಮುಂಭಾಗದಲ್ಲಿ ಅನೇಕ ಭಕ್ತಾದಿಗಳು ಉಪ್ಪು, ಕೊಬ್ಬರಿಯನ್ನು ಸುಟ್ಟು ಶೇಖರಿಸಿಟ್ಟುಕೊಂಡು ಮನೆಗಳಿಗೆ ತೆರಳುತ್ತಿದ್ದರು. ಮನುಷ್ಯನ ಅನೇಕ ರೋಗಗಳಿಗೆ ಇದನ್ನು ಮದ್ದನ್ನಾಗಿ ಉಪಯೋಗಿಸುತ್ತಾರೆ ಇದನ್ನು ಬಳಸುವುದರಿಂದ ರೋಗವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.



ಸ್ವಾಮಿಯ ದರ್ಶನ ಪಡೆಯಲು ಬಾಲಕರು, ಯುವಕರು, ಯುವತಿಯರು, ಮಧ್ಯವಯಸ್ಕರು, ವೃದ್ಧರು ಎಂಬ ವಯೋಮಾನದ ಭೇದವಿಲ್ಲದೆ ದಿನವಿಡೀ ಭಕ್ತಾದಿಗಳು ದರ್ಗಾಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಉರುಸಿನ ಪ್ರಯುಕ್ತ ಸ್ಥಳೀಯರಲ್ಲದೆ ಅನೇಕ ಪಟ್ಟಣಗಳಿಂದ ಮತ್ತು ಹಳ್ಳಿಗಳಿಂದ ಆಗಮಿಸ್ದಿದ ಭಕ್ತಾದಿಗಳು ದರ್ಗಾದ ಅಕ್ಕ-ಪಕ್ಕದಲ್ಲಿ ಟೆಂಟ್‌ಗಳನ್ನು ಹಾಕಿ ಬೀಡು ಬಿಟ್ಟಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.