ಮಂಗಳವಾರ, ಮೇ 11, 2021
23 °C

ಹೂವು ಚೆಲುವೆಲ್ಲ ತಂದೆಂದಿತು...

ಸುಮಿತ್ರಾ ಮಾಲಿಪಾಟೀಲ /ಪ್ರಜವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ ಮೊಹರ್ ಊರಲ್ಲಿ ಈಗ ಹೂವುಗಳದ್ದೇ ಕಂಪು. ಸೂರ್ಯ ನಗರಿಯಲ್ಲಿ ಸುರಿದ ಮುಂಗಾರಿಗೆ ನೆಲದಲ್ಲಿ ಹಸಿರು ಮೂಡಿದರೆ, ನಗರದ ಸಾರ್ವಜನಿಕ ಉದ್ಯಾನ ರಸ್ತೆಯಲ್ಲಿ  ಹೂವು ಗಿಡಗಳ ಮಾರಾಟವೂ ಜೋರಾಗಿದೆ.  ಮಳೆಗಾಲವು ಸಸ್ಯಪ್ರೇಮಿಗಳ ಸ್ವರ್ಗದ ಸಮಯ. ಯಾವುದೇ ಸಸಿ ನೆಟ್ಟರೂ ಚಿಗುರಿ ಬೆಳೆದು ನಿಲ್ಲುವ ಸಂದರ್ಭ. ಈ ಮಾಸದಲ್ಲೇ ಫೈಜುದ್ದೀನ್ ನಗರದಲ್ಲಿ ಸಸಿ ಮಾರಾಟದಲ್ಲಿ ತೊಡಗುತ್ತಾರೆ. `ಹಲವು ವರ್ಷಗಳಿಂದ ಸಸಿ ಮಾಡಿ ಮಾರಾಟ ಮಾಡುವುದು ನನ್ನ ಜೀವನ. ಈ ಹಿಂದೆಗಿಂತಲೂ ಈಗ ಹೆಚ್ಚು ಸಸಿಗಳು ಮಾರಾಟವಾಗುತ್ತಿವೆ. ಕೆಲವೊಂದು ಸಸಿಗಳನ್ನು ಕಸಿ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್‌ಮುಂತಾದ ಕಡೆಗಳಿಂದ ತರಿಸಿದ ಸಸ್ಯಗಳೂ ಮಾರಾಟಕ್ಕಿವೆ' ಎಂದು ಹೇಳಿದರು.ಗೊಬ್ಬರ-ಕುಂಡ: `ಹಿಂದೆ ಹೂವು -ಹಣ್ಣುಗಳ ಸಸಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸಸಿಗಳಿಗೆ ಹಾಕುವ ಗೊಬ್ಬರ, ಪ್ಲಾಸ್ಟಿಕ್ ಹಾಗೂ ಮಣ್ಣಿನ ಕುಂಡಗಳನ್ನು ಮಾರಾಟ ಮಾಡುತ್ತಿದ್ದೇನೆ' ಎಂದರು.  ಸಸಿಗಳ ವೈವಿಧ್ಯ: ಬಟನ್ ಗುಲಾಬಿ, ಗಿಲೇಟರ್ ರೋಜ್, ಬೆಂಗಳೂರು ರೋಜ್, ಜೆರ್ಬೆರಾ, ಕ್ರೋಟನ್, ಸ್ಟಾರ್‌ಲೈಟ್, ಬ್ಲಾಕ್ ಫೈರಸ್, ಗೋಲ್ಡನ್ ಸ್ಟಾರ್‌ಲೈಟ್, ಷೋ ಪ್ಲಾಂಟ್, ಮೋರ್ ಪಂಕ್, ಕ್ರಿಸ್‌ಮಸ್ ಟ್ರೀ, ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ನಂದಿಬಟ್ಲು, ದಾಸವಾಳ, ಕಣಗಿಲೆ, ಸೇವಂತಿ, ಟೇಬಲ್ ರಾಜ್, ಸ್ವಸ್ತಿಕ್ ಹೂ ಹೀಗೆ ಹಲವು ಸಸ್ಯ    ವೈವಿಧ್ಯಗಳು ಇಲ್ಲಿವೆ.ಹಣ್ಣಿನ ಗಿಡಗಳು: ಆರ್.ಕೆ. ಪಾಮ್, ತೆಂಗು, ಮಾವು, ಚಿಕ್ಕು, ದಾಳಿಂಬೆ, ಮೋಸಂಬಿ, ಸಂತ್ರಿ, ಅಂಜೂರ, ಪೇರಳೆ(ಸೀಬೆ), ಪಪ್ಪಾಯಿ, ಬಾದಲ್ ಗಿಡ, ರೆಗ್‌ಜೋರಾ ಮುಂತಾದ ಕಡಿಮೆ ಸಮಯದಲ್ಲಿ ಹಣ್ಣು ನೀಡುವ ಗಿಡಗಳೂ ಇಲ್ಲಿವೆ. ತುಳಸಿ,  ನುಗ್ಗೆ, ಲೋಳೆಸರ (ಅಲೋವೆರಾ), ಅಶೋಕ ಗಿಡ ಹೀಗೆ ಹಲವು ಔಷಧೀಯ ಹಾಗೂ ಆಹಾರದ  ಪ್ರಬೇಧಗಳಿಗೂ ಇಲ್ಲಿ ಬೇಡಿಕೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.