ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹ

ಗುರುವಾರ , ಜೂಲೈ 18, 2019
26 °C

ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹ

Published:
Updated:

ಕೋಲಾರ: ಹೂವು ಮಾರಾಟಕ್ಕೆ ಅನುವಾಗುವಂತೆ ಸೂಕ್ತ ರೀತಿಯ ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಸಗಟು ಹೂವು ಮಾರಾಟಗಾರರ ಸಂಘದ ವತಿಯಿಂದ ನಗರಸಭೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.ನಗರದ ಹಳೇ ಬಸ್ ನಿಲ್ದಾಣದಲ್ಲಿ ಸುಮಾರು 40 ವರ್ಷಗಳಿಂದ ಪೆಟ್ಟಿಗೆ ಅಂಗಡಿಗಳಲ್ಲಿ ಹೂವಿನ ಸಗಟು ವ್ಯಾಪಾರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೋಲಾರ ಸುತ್ತಮುತ್ತಲಿನ ರೈತರು ಬೆಳೆದು ತರುವ ಹೂವುಗಳನ್ನು ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ ಎಂದು .2006 ಫೆ.14ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯರ ಹೇಳಿದ್ದ ವಿಷಯ ಪ್ರಸ್ತಾಪಿಸಿ, ಹಳೇ ಬಸ್ ನಿಲ್ದಾಣದ ಹೋಟೆಲ್ ಹಿಂಭಾಗದಲ್ಲಿ ಹೂವು ಮಾರುಕಟ್ಟೆ ನಿರ್ಮಿಸಿ ಇದಕ್ಕೆ ಸಿ. ಬೈರೇಗೌಡರ ಹೆಸರನ್ನು ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದರ ಬಗ್ಗೆ ಈಗ ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದರು.ಹಳೇ ಬಸ್ ನಿಲ್ದಾಣದಲ್ಲಿಂದ ಬೇರೆ ಗ್ರಾಮಗಳಿಗೆ ಸಣ್ಣ ಪ್ರಮಾಣದಲ್ಲಿ ಹೂವು ಸಾಗಿಸಲು ಅನೇಕ ಸೌಕರ್ಯವಿದೆ. ಆದರೆ ಈ ಹಿಂದೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣ ಮಾಡಿದ ಹೂವಿನ ಚಿಲ್ಲರೆ ಮತ್ತು ಸಗಟು ವ್ಯಾಪಾರ ಮಾಡಲು ಸೂಕ್ತ ಸ್ಥಳಇರುವುದಿಲ್ಲ.ಗ್ರಾಹಕರು 100 ಗ್ರಾಂ ಹೂವು ಪಡೆಯಲು ಸುಮಾರು 5 ಕಿ.ಮೀ ದೂರದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬರಲು ದುಬಾರಿ ಹಣ ಭರಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಗ್ರಾಹಕರಿಗೆ, ರೈತರಿಗೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಮಳಿಗೆ ನಿರ್ಮಿಸಿ ಬಾಡಿಗೆ ಆಧಾರದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಸಂಘದ ಅಧ್ಯಕ್ಷ ಕೆ.ನಾರಾಯಣ ಸ್ವಾಮಿ, ಪದಾಧಿಕಾರಿಗಳಾದ ಮಹಮದ್ ಖಾಜಾ,  ಸೈಯದ್ ಸೂರ್ ಪಾಷ, ನಂಜುಂಡಪ್ಪ, ಕೆ.ಗೋಪಾಕೃಷ್ಣ, ಆರ್.ವೆಂಕಟೇಶಪ್ಪ,ಎಸ್.ಕೆ.ಅಕ್ರಂಪಾಷ, ಆರ್.ನಾರಾಯಣಸ್ವಾಮಿ, ನಾಗರಾಜಪ್ಪ, ಸಾಮಾ, ಸತೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry