ಶನಿವಾರ, ಡಿಸೆಂಬರ್ 7, 2019
21 °C
ಪಂಚರಂಗಿ

ಹೃತಿಕ್–ಸುಸೇನ್‌ ದಾಂಪತ್ಯದಲ್ಲಿ ಇಲ್ಲ ಬಿರುಕು

Published:
Updated:
ಹೃತಿಕ್–ಸುಸೇನ್‌ ದಾಂಪತ್ಯದಲ್ಲಿ ಇಲ್ಲ ಬಿರುಕು

ಹೃತಿಕ್ ರೋಷನ್‌–ಸುಸೇನ್‌ ಖಾನ್‌ ನಡುವಿನ ದಾಂಪತ್ಯ ಮುರಿದುಹೋಗಿದೆ ಎಂದು ಮೈಕ್ರೊಬ್ಲಾಗ್‌ ಒಂದು ಪ್ರಕಟಿಸಿದ್ದು, ಹೃತಿಕ್‌ ಅದು ಗಾಸಿಪ್‌ ಅಷ್ಟೇ, ನಂಬಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.ಮೂವತ್ತೊಂಬತ್ತು ವರ್ಷ ವಯಸ್ಸಿನ ಹೃತಿಕ್‌ ‘ಕ್ರಿಶ್‌ 3’ ಚಿತ್ರವನ್ನು ಬಿಡುಗಡೆ ಮಾಡುವ ಭರಾಟೆಯಲ್ಲಿ ತೊಡಗಿರುವಾಗ ಇಂಥದ್ದೊಂದು ಗಾಸಿಪ್‌ ಹಬ್ಬಿದ್ದು, ಅವರಿಗೆ ಸಿಟ್ಟು ತರಿಸಿದೆ. ‘ನಿಮ್ಮ ಬದುಕು ನಿಮ್ಮದಷ್ಟೇ ಅಲ್ಲ; ಅಕ್ಕ–ಪಕ್ಕದಲ್ಲಿ ಇರುವವರದ್ದೂ ಅದರಲ್ಲಿ ಪಾಲಿರುತ್ತದೆ. ಈ ಸತ್ಯವನ್ನು ಅರಿತು ಯಾರೇ ಆಗಲೀ ಅಭಿಪ್ರಾಯ ವ್ಯಕ್ತಪಡಿಸಬೇಕು. ಇಲ್ಲಸಲ್ಲದ ಸುದ್ದಿಯನ್ನು ಗಾಳಿ ಮೇಲೆ ತೇಲಿಬಿಡುವುದು ಸಲ್ಲದು’ ಎಂದು ಹೃತಿಕ್‌ ಟ್ವೀಟ್‌ ಮಾಡಿದ್ದಾರೆ.ಒಳಾಂಗಣ ವಿನ್ಯಾಸದ ಉದ್ಯಮದಲ್ಲಿ ತೊಡಗಿರುವ ಸುಸೇನ್‌ ಈ ವಿಷಯದ ಕುರಿತು ಏನೂ ಪ್ರತಿಕ್ರಿಯಿಸಿಲ್ಲ. ಅವರ ಸಹೋದರಿ ಫರ್‍್ಹಾ ಖಾನ್‌ ಅಲಿ ಈ ಕುರಿತು ಟ್ವೀಟಿಸಿರುವುದು ಹೀಗೆ: ‘ಸೆಲೆಬ್ರಿಟಿಗಳು ಸದಾ ಗಾಸಿಪ್‌ಗೆ ವಸ್ತುವಾಗುತ್ತಾರೆ. ವೈಯಕ್ತಿಕ ಬದುಕಿನಲ್ಲಿ ಮಾಧ್ಯಮ ಹೀಗೆ ಲಗ್ಗೆಇಡುವುದು ಹೀನವಾದ ಕ್ರಿಯೆ. ಎಲ್ಲರ ವೈಯಕ್ತಿಕ ಬದುಕಿನ ಬಗೆಗೆ ಗೌರವ ಇರಬೇಕು’.ಹೃತಿಕ್‌, ಸುಸೇನ್‌ ಇಬ್ಬರೂ ದೀರ್ಘ ಕಾಲ ಡೇಟಿಂಗ್‌ ಮಾಡಿದ ನಂತರ 2000ನೇ ಇಸವಿ ಡಿಸೆಂಬರ್‌ನಲ್ಲಿ ಬದುವೆಯಾಗಿದ್ದರು. ಹೃತಿಕ್‌ ರೋಷನ್‌ ಮೊದಲ ಚಿತ್ರ ‘ಕಹೋ ನಾ ಪ್ಯಾರ್‌ ಹೈ’ ಬಿಡುಗಡೆಯಾದದ್ದೂ ಅದೇ ವರ್ಷ.

ಪ್ರತಿಕ್ರಿಯಿಸಿ (+)