ಮಂಗಳವಾರ, ನವೆಂಬರ್ 12, 2019
28 °C

ಹೃತಿಕ್ ಫೈಟು, ಕತ್ರಿನಾ ಗ್ಲಾಮರ್

Published:
Updated:

ಸ್ಟೈಲಿಶ್ ನಟ ಹೃತಿಕ್ ರೋಷನ್ ಹಾಗೂ ಕತ್ರಿನಾ ಕೈಫ್ ತಾರಾಗಣವಿರುವ `ಬ್ಯಾಂಗ್ ಬ್ಯಾಂಗ್' ಚಿತ್ರದ ಚಿತ್ರೀಕರಣ ಮೇ 1ರಿಂದ ಪ್ರಾರಂಭಗೊಳ್ಳಲಿದೆಯಂತೆ. ಮುಂದಿನ ವರ್ಷ ಅದೇ ದಿನಾಂಕ (ಮೇ 01, 2014) ಚಿತ್ರ ತೆರೆಕಾಣಲಿದೆಯಂತೆ.`ಎ ಫಾಕ್ಸ್ ಸ್ಟಾರ್ ಸ್ಟುಡಿಯೊ' ನಿರ್ಮಿಸುತ್ತಿರುವ `ಬ್ಯಾಂಗ್ ಬ್ಯಾಂಗ್' ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಈ ಹಿಂದೆ `ಬಚ್ನಾ ಯೇ ಹಸೀನೊ', `ಸಲಾಂ ನಮಸ್ತೆ' ಹಾಗೂ `ಅಂಜಾನಾ ಅಂಜಾನಿ' ಚಿತ್ರಗಳನ್ನು ನಿರ್ದೇಶಿಸಿದ್ದರು.`ಬ್ಯಾಂಗ್ ಬ್ಯಾಂಗ್' ಚಿತ್ರವನ್ನು ಭಾರತ ಹಾಗೂ ಯುರೋಪ್‌ನಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. `ಯುರೋಪ್‌ನಲ್ಲಿ ಮೈನವಿರೇಳಿಸುವಂಥ ಸ್ಟಂಟ್‌ಗಳನ್ನು ಚಿತ್ರೀಕರಣ ಮಾಡಲಾಗುವುದು. ಹೃತಿಕ್ ಮತ್ತು ಕತ್ರಿನಾ ಅವರನ್ನು ಈ ಚಿತ್ರದಲ್ಲಿ ಈ ಹಿಂದೆ ನೋಡಿರದ ಅವತಾರದಲ್ಲಿ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಹೃತಿಕ್ ಹಾಗೂ ಕತ್ರಿನಾ ಅವರನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕರನ್ನೂ ರೋಮಾಂಚನಗೊಳ್ಳಲಿದ್ದಾನೆ' ಎಂದಿದೆ ಚಿತ್ರತಂಡ.ಈ ಚಿತ್ರಕ್ಕೆ ಸುಜಾಯ್ ಘೋಷ್ ಚಿತ್ರಕಥೆ ಬರೆದಿದ್ದು, ಸುರೇಶ್ ನಾಯರ್ ಮತ್ತು ಅಬ್ಬಾಸ್ ತೈರೇವಾಲಾ ಅವರ ಸಂಭಾಷಣೆ ಇದೆ. ಅಂದಹಾಗೆ, ಹೃತಿಕ್ ಮತ್ತು ಕತ್ರಿನಾ ಈ ಹಿಂದೆ `ಜಿಂದಗಿ ನಾ ಮಿಲೆಂಗಿ ದುಬಾರಾ' ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.            

ಪ್ರತಿಕ್ರಿಯಿಸಿ (+)