ಶನಿವಾರ, ಡಿಸೆಂಬರ್ 7, 2019
26 °C

ಹೃತಿಕ್ ರೋಷನ್‌ಗೆ 38

Published:
Updated:
ಹೃತಿಕ್ ರೋಷನ್‌ಗೆ 38

ಜ.10ರಂದು 38ರ ಹೊಸಿಲು ದಾಟಿರುವ ಹೃತಿಕ್ ರೋಷನ್ ಆಗಲೇ ಸಿನಿಮಾ ರಂಗಕ್ಕೆ ಬಂದು ಭರ್ತಿ ಒಂದು ಡಜನ್ ವರ್ಷ ಮುಗಿಸಿದ್ದಾರೆ.ಜ.14ಕ್ಕೆ ಅವರ ಮೊದಲ ಚಿತ್ರ `ಕಹೋ ನಾ ಪ್ಯಾರ್ ಹೈ~ ಬಿಡುಗಡೆಯಾಗಿ 12 ವರ್ಷವಾಯಿತು. ಈ ಒಂದು ದಶಕದಲ್ಲಿ ಲವರ್ ಬಾಯ್ ಇಮೇಜ್‌ನಿಂದ ಗುಜಾರಿಷ್‌ನ ಮನೋಜ್ಞ ಅಭಿನಯದವರೆಗೆ ಹೃತಿಕ್ ಹಲವಾರು ಪಾತ್ರಗಳನ್ನು ನಿಭಾಯಿಸಿದ್ದಾರೆ. `ಕೋಯಿ ಮಿಲ್ ಗಯಾ~ ಮಂದಬುದ್ಧಿಯ ಯುವಕನ ಪಾತ್ರ, ಕ್ರಿಶ್‌ನಂಥ ಹೀರೊಯಿಕ್ ಪಾತ್ರಗಳಿರಲಿ, ಧೂಂನಲ್ಲಿಯ ಆ್ಯಕ್ಷನ್ ಪಾತ್ರವಿರಲಿ, ಎಲ್ಲ ಬಗೆ ಚಿತ್ರಗಳಲ್ಲೂ ನಟಿಸಿ, ಸೈ ಎನಿಸಿಕೊಂಡಿದ್ದಾರೆ.ಆದರೆ ಈಗಲೂ ತಮ್ಮ ತಂದೆ `ರಾಕೇಶ್ ರೋಷನ್ ಮಾತ್ರ ನನಗೆ ನಿಜವಾದ ಹೀರೊ. ಈಗ ಮುಂಬರಲಿರುವ `ಅಗ್ನಿಪಥ್~ ಚಿತ್ರದ ಬಿಡುಗಡೆಯನ್ನು ಇನ್ನಿಲ್ಲದಂತೆ ಕಾಯುವಂತಾಗಿದೆ. ಈವರೆಗಿನ ಎಲ್ಲ ಚಿತ್ರಗಳಿಗಿಂತಲೂ ಕ್ಲಿಷ್ಟಕರ ಸಿನೆಮಾ ಇದು. ವಿಶೇಷವಾಗಿ ಕ್ಲೈಮ್ಯಾಕ್ಸ್ ದೃಶ್ಯವಂತೂ ಮರೆಯಲಾಗದು. ಪ್ರಿಯಾಂಕಳ ಅಭಿನಯವೂ ಅದ್ಭುತವಾಗಿತ್ತು. ಬಹುಶಃ ಪ್ರಿಯಾಂಕಳ ಈವರೆಗಿನ ಎಲ್ಲ ಚಿತ್ರಗಳಿಗಿಂತ ಭಿನ್ನವಾಗಿದೆ~ ಎಂದು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)