ಹೃತಿಕ್ ರೋಷನ್‌ಗೆ 39

7

ಹೃತಿಕ್ ರೋಷನ್‌ಗೆ 39

Published:
Updated:
ಹೃತಿಕ್ ರೋಷನ್‌ಗೆ 39

ಬಾಲಿವುಡ್‌ನ ಹಾಟ್ ಹಾಟ್ ಹೀರೊ ಹೃತಿಕ್ ರೋಷನ್ ಮೊನ್ನೆಯಷ್ಟೇ 39ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂಬಂಧ ಪತ್ನಿ ಸುಜಾನ್ ಒಂದು ಅಚ್ಚರಿಯ ಪಾರ್ಟಿಯನ್ನೂ ಆಯೋಜಿಸಿದ್ದರು. ಅದು ಹೇಗೋ ಈ ಸುದ್ದಿ ಮಾಧ್ಯಮಗಳಿಗೆ ಸೋರಿಕೆಯಾಯಿತು. ಅಚ್ಚರಿಯ ಪಾರ್ಟಿ ಕುರಿತು ಹೃತಿಕ್‌ಗೆ ಗೊತ್ತಾಗುವ ಮುಂಚೆಯೇ ಅವರ ಅಭಿಮಾನಿ ಬಳಗವನ್ನು ಸುದ್ದಿ ತಲುಪಿತ್ತು. ಜುಹುವಿನಲ್ಲಿರುವ ಹೃತಿಕ್ ರೋಷನ್ ಮನೆ ಎದುರು ಅಭಿಮಾನಿಗಳ ಬೃಹತ್ ದಂಡೇ ಜಮಾಯಿಸಿತ್ತು. ಮಾಧ್ಯಮದವರೂ ಅಲ್ಲಿ ನೆರೆದಿದ್ದರು. “ಸುಜಾನ್ ನೀಡಬೇಕಾದ ಅಚ್ಚರಿಯನ್ನು ಮಾಧ್ಯಮದವರೇ ನೀಡಿದ್ದು `ಸಂತಸ' ತಂದಿದೆ” ಎಂದು ಸ್ವತಃ ಹೃತಿಕ್ ಹೇಳಿದ್ದಾರೆ.`ಕ್ರಿಷ್-3' ಸಿನಿಮಾ ಚಿತ್ರೀಕರಣಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಭದ್ರತೆ ನೀಡಿರುವುದರ ಜತೆಗೆ ಮಾಧ್ಯಮಗಳನ್ನೂ ದೂರ ಇಟ್ಟಿರುವುದನ್ನು ಹೃತಿಕ್ ಸಮರ್ಥಿಸಿಕೊಂಡಿದ್ದಾರೆ. ಚಿತ್ರವು 2013ರ ದೀಪಾವಳಿ ಸಂದರ್ಭದಲ್ಲಿ ತೆರೆಕಾಣಲಿದೆ. ಅಲ್ಲಿಯವರೆಗೂ `ಸೂಪರ್ ಹೀರೊ' ಮುಖ ಸೋರಿಕೆಯಾಗದಂತೆ ತಡೆಯುವುದು ಚಿತ್ರದ ಮಾರುಕಟ್ಟೆ ದೃಷ್ಟಿಯಿಂದ ಅತ್ಯಗತ್ಯ ಎಂದಿದ್ದಾರೆ. ಒಂದು ಅತ್ಯುತ್ತಮವಾದದ್ದನ್ನು ಸೃಷ್ಟಿಸಿದ್ದೇವೆ ಎಂದಾದರೆ ಅದನ್ನು ಅಷ್ಟೇ ಅದ್ಭುತವಾಗಿ ಜನರ ಮುಂದಿಡುವುದೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಹೃತಿಕ್ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಅತ್ಯಂತ ಸವಾಲನ್ನು `ಕ್ರಿಷ್-3'ನಲ್ಲಿ ಎದುರಿಸಿದ್ದೇನೆ ಎಂದಿದ್ದಾರೆ.ಕಳೆದ ಐದು ವರ್ಷಗಳಿಂದ ಈ ಚಿತ್ರಕಥೆಯ ಮೇಲೆ ಕೆಲಸ ಮಾಡಲಾಗಿದೆ. ಪ್ರಿಯಾಂಕಾ ಚೋಪ್ರಾ, ವಿವೇಕ್ ಒಬೆರಾಯ್ ಹಾಗೂ ಕಂಗನಾ ರನೌತ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದ್ದಿದರೂ ಬಹು ಮುಖ್ಯವಾದ ಸ್ಪೆಷಲ್ ಎಫೆಕ್ಟ್ ಕೆಲಸ ಬಾಕಿ ಇದೆ ಎಂದು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry