ಹೃತಿಕ್ ಸ್ಟೈಲ್ ಐಕಾನ್

7

ಹೃತಿಕ್ ಸ್ಟೈಲ್ ಐಕಾನ್

Published:
Updated:
ಹೃತಿಕ್ ಸ್ಟೈಲ್ ಐಕಾನ್

ಯಾಹೂ ಈಚೆಗೆ ಕೈಗೊಂಡ ಸಮೀಕ್ಷೆಯ ಪ್ರಕಾರ ಹೃತಿಕ್ ರೋಷನ್ ಸ್ಟೈಲ್ ಐಕಾನ್ ಎಂದು ಗುರುತಿಸಲಾಗಿದೆ.

ಅಂತರ್ಜಾಲದಲ್ಲಿ ಸದಾ ಬೆರಳಾಡಿಸುವವರಿಗಾಗಿ ಈ ಸಮೀಕ್ಷೆಯನ್ನು ಏರ್ಪಡಿಸಲಾಗಿತ್ತು. ಭಾರತದ ಸ್ಟೈಲ್ ಐಕಾನ್ ಯಾರಿರಬಹುದು ಎಂಬ ಕುತೂಹಲ ಕೂಡ ಈ ಸಮೀಕ್ಷೆಯ ಹಿಂದಿತ್ತು.

ಮಹೇಂದ್ರ ಸಿಂಗ್ ಧೋನಿ ಹಾಗೂ ಶಾಹ್‌ರುಖ್‌ಖಾನ್‌ಗೆ  ಪೈಪೋಟಿ ನೀಡಿರುವ ಹೃತಿಕ್ ಅವರ ಬದಲಾಗುವ ಲುಕ್‌ನೊಂದಿಗೆ ಸ್ಟೈಲ್ ಐಕಾನ್ ಆಗಿ ಹೊರ ಹೊಮ್ಮಿದ್ದಾರೆ.

ಶೇ 18ರಷ್ಟು ಮತಗಳು ಹೃತಿಕ್ ಪರವಾಗಿವೆ. ಹೊಂಬಣ್ಣದ ಕತ್ತಿನುದ್ದದ ಕೇಶವಿನ್ಯಾಸ, ಹುರಿಗೊಳಿಸಿದ ಮೈಕಟ್ಟು, ಸಣ್ಣಗೆ ಕತ್ತರಿಸಿರುವ ಶಿಸ್ತಿನ ಆಳಿನಂತಿರುವ ಹೃತಿಕ್‌ನ ಕೇಶ ವಿನ್ಯಾಸವನ್ನು ಅನುಸರಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಧೋನಿಗೆ ಶೇ16ರಷ್ಟು ಮತ ದೊರೆತಿದ್ದರೆ ಕಿಂಗ್ ಖಾನ್ ಶೇ 15ರಷ್ಟು ಮತಗಳಿಸಿದ್ದಾರೆ.

ಅಮಿತಾಬ್ ಬಚ್ಚನ್ ಸೆಲೆಬ್ರಿಟಿಗಳಲ್ಲಿಯೇ ಅತಿಶಿಸ್ತಿನ ಉಡುಪು ತೊಡುವವರು ಎಂದು ಹೆಸರಾಗಿದ್ದಾರೆ. ಇವರೊಂದಿಗೆ ಉದ್ಯಮಿ ರತನ್ ಟಾಟಾ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಗರಿಮುರಿಯದ ಸೀರೆಯೂ ಯುವಜನರಲ್ಲಿ ವಿಶೇಷ ಛಾಪನ್ನು ಮೂಡಿಸಿದೆ.

ಅಭಿ-ಐಶ್ ಜೋಡಿ, ಅತಿ ಸ್ಟೈಲಿಷ್ ಜೋಡಿ ಎಂಬ ಪಟ್ಟ ಗಳಿಸಿದೆ. ಆಮೀರ್‌ಖಾನ್ ಸ್ಟೈಲ್ ಹಾಗೂ ತಂತ್ರಜ್ಞಾನ ಎರಡರಲ್ಲಿಯೂ ಮುಂದಿರುವ ಹೆಸರು ಎಂದಿದ್ದಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡವರು.

ಭಾರತೀಯ ಸಾಂಪ್ರದಾಯಿಕ ಉಡುಗೆ-ತೊಡುಗೆಗೆ ಕೃಷ್ಣ ಸುಂದರಿ ರೇಖಾ ಹೆಚ್ಚಿನ ಮತಗಳಿಸಿದ್ದಾರೆ. ಮಾದಕ ಸುಂದರಿ ವಿದ್ಯಾ ಬಾಲನ್ ಸಮಕಾಲೀನ ಫ್ಯಾಶನ್‌ಗೆ ಹೆಸರಾಗಿದ್ದಾರೆ. ರ‌್ಯಾಂಪ್ ಮೇಲೆ ಮಾಡೆಲ್ ಅಲ್ಲದೆ, ಮಾರ್ಜಾಲ ನಡಿಗೆಗೆ  ಕ್ರಿಕೆಟರ್ ವಿರಾಟ್ ಕೊಹ್ಲಿ ಮತ ಪಡೆದಿದ್ದಾರೆ.

ದಬಾಂಗ್ ಚಿತ್ರದ ಮುನ್ನಿ ಖ್ಯಾತಿಯ ಮಲೈಕಾ ಅರೋರಾ  ಅತಿ ಸ್ಟೈಲಿಷ್ ಅಮ್ಮ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.

ಯಾಹೂ ತಾಣದಲ್ಲಿ ಲೈಫ್‌ಸ್ಟೈಲ್, ಸಿನೆಮಾ ನೋಡುವವರಿಗೆ ಬಹು ಆಯ್ಕೆಯ 10 ಪ್ರಶ್ನೆಗಳನ್ನು ನೀಡಲಾಗಿತ್ತು. ಆ ಪ್ರಶ್ನಾವಳಿಯ ಆಧಾರದ ಮೇಲೆ ಈ ಫಲಿತಾಂಶವನ್ನು ನೀಡಲಾಗಿದೆ ಎಂದು ಯಾಹೂ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry