ಭಾನುವಾರ, ಡಿಸೆಂಬರ್ 8, 2019
21 °C

ಹೃದಯದ ಬಗ್ಗೆ...

Published:
Updated:
ಹೃದಯದ ಬಗ್ಗೆ...

ರಾವ್ 43 ವರ್ಷ ವಯಸ್ಸಿನ, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಇರುವ ವೃತ್ತಿಪರ ನೌಕರ. ಹೃದಯ ಬೇನೆಯಿಂದಾಗಿ ತಾತ-ಅಜ್ಜಿಯನ್ನು ಕಳೆದುಕೊಂಡಿದ್ದರು. ಹೃದಯ ಬೇನೆಯು ಕೌಟುಂಬಿಕವಾಗಿ ಬರುತ್ತದೆ ಎಂದು ನಂಬಿದ್ದ ಅವರು ತಮ್ಮ ವೃದ್ಧ ತಂದೆ-ತಾಯಿಯ ಬಗೆಗೆ ಆತಂಕಗೊಂಡಿದ್ದರು. ಹೃದಯ ಬೇನೆಯನ್ನು ತಡೆಯಲು ಅವರು ನಿರಂತರವಾಗಿ ಯತ್ನಿಸುತ್ತಿದ್ದರು.ದೇವ್ 26 ವರ್ಷದ ಉತ್ಸಾಹಿ ಯುವಕ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ನಿಯಮಿತವಾಗಿ ಮದ್ಯಪಾನ, ಧೂಮಪಾನ ಮಾಡುತ್ತಿದ್ದು, ದೇಹದಾರ್ಢ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗತ ತರಬೇತುದಾರನನ್ನು ಹೊಂದಿದ್ದರು. ಅವರ ನಂಬಿಕೆ ಎಂದರೆ: ನನಗೆ ಹೃದಯ ಬೇನೆ ಬರುವುದಿಲ್ಲ. ಇದು, ಕೇವಲ ವಯಸ್ಕರಿಗೆ ಮತ್ತು ಬೊಜ್ಜು ಇರುವವರಿಗೆ ಮಾತ್ರ ಬರುತ್ತದೆ.32 ವರ್ಷ ವಯಸ್ಸಿನ ಸರಿತಾ (ಹೆಸರು ಬದಲಿಸಲಾಗಿದೆ) ಗೃಹಿಣಿ, ಎರಡು ಮಕ್ಕಳ ತಾಯಿ. ಪತಿಗೆ ಸಿದ್ಧ ಉಡುಪುಗಳ ವ್ಯವಹಾರದಲ್ಲಿಯೂ ನೆರವು ನೀಡುತ್ತಿದ್ದರು. ತನ್ನ ಸರಳ ಸ್ವಭಾವದಿಂದಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಆಗಾಗ್ಗೆ ಆಯಾಸವಾಗುವ ಅನುಭವ. ಆದರೆ, ಅವರ ಮನಸ್ಸಿನಲ್ಲಿ ಹೃದಯ ಬೇನೆಯ ಚಿಂತನೆಯೂ ಇರಲಿಲ್ಲ. ಇದು, ಪುರುಷರಿಗೆ ಮಾತ್ರವೇ ಬರುತ್ತದೆ ಎಂಬುದು ಅವರ ನಂಬಿಕೆ. ಈ ಮೂವರ ಪೈಕಿ ಹೃದಯ ಬೇನೆ ಕಾಣಿಸಿಕೊಳ್ಳುವ ಹೆಚ್ಚು ಸಾಧ್ಯತೆಗಳು ಯಾರಿಗಿದೆ?ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯೂಎಚ್‌ಒ) ಅಂಕಿ ಅಂಶಗಳ ಪ್ರಕಾರ, ಜಾಗತಿಕವಾಗಿ ಸಾವು ತರುವ ರೋಗಗಳಲ್ಲಿ ಮೊದಲನೆಯದು. ಆದರೆ, ಒಳ್ಳೆಯ ಸುದ್ದಿ ಎಂದರೆ ಅಪಾಯದ ಸೂಚನೆಗಳನ್ನು ತಿಳಿಯುವುದು,ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ 5 ರಲ್ಲಿ ನಾಲ್ಕು ಸಾವುಗಳನ್ನು ತಡೆಯಬಹುದು. ರಾವ್ ಅವರು ಕೌಟುಂಬಿಕ ಹಿನ್ನೆಲೆಯನ್ನು ಬದಲಿಸಲು ಆಗದಿದ್ದರೂ, ಅಪಾಯಕರ ಅಂಶಗಳನ್ನು ಕುಗ್ಗಿಸಬಹುದು. ದೇವ್ ತನಗೆ ಹೃದಯ ಬೇನೆ ಬರುವುದಿಲ್ಲ ಎಂದೋ, ಸರಿತಾ ಇದು ಮಹಿಳೆಯರಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಬಹುದು. ಆದರೆ, ಅವರ ಜೀವನಶೈಲಿಯ ಕಾರಣ ದೇವ್ ಮತ್ತು ಸರಿತಾ ಇಬ್ಬರೂ ಅಪಾಯ ತಂದುಕೊಳ್ಳಬಹುದು. ಈ ಮೂವರು ತಮ್ಮ ಕೌಟುಂಬಿಕ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು.ಯಾವುದೇ ಅಪಾಯದ ಸೂಚನೆಗಳು ಕಾಣಿಸಿಕೊಳ್ಳದೇ ಇದ್ದರೂ ಹೃದಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಇಲ್ಲಿ ಐದು ಸರಳ ಸಲಹೆಗಳಿವೆ.ಧೂಮಪಾನ/ಮದ್ಯಪಾನ ಬಳಕೆ ಕೈಬಿಡಿ: ಯಾವುದೇ ವಿಧದಲ್ಲಿ ಹೊಗೆಸೊಪ್ಪು ಸೇವೆಯು ಹೃದಯ ಬೇನೆಗೆ ಕಾರಣವಾಗುವ ಅತಿದೊಡ್ಡ ಅಪಾಯ.  ಧೂಮಪಾನ  ಅಥವಾ ಸಣ್ಣ ಪ್ರಮಾಣದಲ್ಲಿ ಹೊಗೆಸೊಪ್ಪು ಸೇವನೆಯೂ ಅಪಾಯ ತಂದೊಡ್ಡಬಹುದು. ಮೊದಲು ಧೂಮಪಾನ ಕೈಬಿಡಿ. ಮದ್ಯಪಾನದ ಮೇಲೆ ನಿಯಂತ್ರಣ ಇರಲಿ.ಆರೋಗ್ಯಕರ ಆಹಾರ ಸೇವನೆ: ಅಧಿಕ ಉಪ್ಪು ಸೇವನೆ ಅಥವಾ ಉಪ್ಪಿನ ಪಥ್ಯವನ್ನು ತಪ್ಪಿಸಿ. ಬೊಜ್ಜಿನ ಅಂಶವಿರುವ ಆಹಾರ ಕಡಿಮೆ ಮಾಡಿ.ವ್ಯಾಯಾಮ ಮತ್ತು ತೂಕ ನಿಯಂತ್ರಣ: ನಿತ್ಯ 30 ರಿಂದ 60 ನಿಮಿಷ, ಕನಿಷ್ಠ ವಾರಕ್ಕೆ ಐದು ದಿನ ದೈಹಿಕ ಕಸರತ್ತು ಮಾಡಿ. ನಿಮ್ಮ ರಕ್ತದೊತ್ತಡ, ಸಕ್ಕರೆ ಅಂಶ, ಕೊಬ್ಬು ಪ್ರಮಾಣವನ್ನು ತಿಳಿಯಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ.ಒತ್ತಡವನ್ನು ಕಡಿಮೆ ಮಾಡಿಕೊಳ್ಳಿರಿ: ಹೃದಯ ಬೇನೆ ಹೆಚ್ಚುವಲ್ಲಿ ಒತ್ತಡದ ಪಾತ್ರ ಮುಖ್ಯವಾದುದು. ಸಮತೋಲನದ ಜೀವನ ಸಾಧಿಸಲು ಒತ್ತಡ ಏರುಪೇರು ಆಗದಂತೆ ಎಚ್ಚರ ವಹಿಸಬೇಕು.ಯೋಗ, ವೈದ್ಯಕೀಯ ಸಲಹೆ, ಉಸಿರಾಟದ ಕಸರತ್ತು, ಒತ್ತಡ ನಿಯಂತ್ರಿಸಲು ಸಹಕಾರಿ ಆಗಬಹುದು. ಒತ್ತಡ ನಿಯಂತ್ರಣದ ಸಲಹೆಗಳಿಗಾಗಿ ವೈದ್ಯರ ಸಲಹೆ ಪಡೆಯಬಹುದು. ಹೊಸದಾಗಿ ಆರೋಗ್ಯಕರ ಬದುಕು ಆರಂಭಿಸಲು ನಿಮ್ಮ ಆರೋಗ್ಯದಲ್ಲಿಯೂ ಬದಲಾವಣೆ ಮಾಡಿಕೊಳ್ಳಿರಿ!

 

 

ಪ್ರತಿಕ್ರಿಯಿಸಿ (+)