ಹೃದಯಾಘಾತ: ಎಎಸ್‌ಐ ಸಾವು

7

ಹೃದಯಾಘಾತ: ಎಎಸ್‌ಐ ಸಾವು

Published:
Updated:

ಬೆಂಗಳೂರು: ಕರ್ತವ್ಯ ನಿರತರಾಗಿದ್ದ ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಪೊಲೀಸ್ ಠಾಣೆ ಎಎಸ್‌ಐ ಮೋಹನ್ (51) ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಂಜೆ ಐದು ಗಂಟೆ ಸುಮಾರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರು ಠಾಣೆಯಲ್ಲೇ ಕುಸಿದುಬಿದ್ದರು.ಠಾಣೆಯ ಇತರೆ ಸಿಬ್ಬಂದಿ ಅವರನ್ನು ಕೂಡಲೇ ನಾರಾಯಣ ಹೃದಯಾಲಯಕ್ಕೆ ಕರೆದೊಯ್ದರು. ಆದರೆ, ಹೃದಯಾಘಾತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮೂಲತಃ ಆನೇಕಲ್‌ನ ಅವರು ಇಲಾಖೆಗೆ ಸೇರಿ 26 ವರ್ಷವಾಗಿತ್ತು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry