ಭಾನುವಾರ, ಮೇ 9, 2021
27 °C

`ಹೃದಯ ವೈಶಾಲ್ಯ ಬೆಳೆಸಿಕೊಳ್ಳಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮನುಷ್ಯ ಸಾಧನೆಯಿಂದ, ಶ್ರೀಮಂತಿಕೆಯಿಂದ ಜೀವನದಲ್ಲಿ ಪರಿಪೂರ್ಣತೆ ಕಾಣಲು ಸಾಧ್ಯವಾಗುವುದಿಲ್ಲ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಹೃದಯವೈಶಾಲ್ಯತೆ ಬೆಳೆಸಿಕೊಳ್ಳಬೇಕು. ತಮ್ಮ ಜಾತಿ, ಧರ್ಮ, ಭಾಷೆಯ ಬಗ್ಗೆ ಸಂವೇದನೆ ತೋರುವಂತೆ ಸೇವಾ ಕಾರ್ಯದಲ್ಲೂ ಸಂವೇದನಾಶೀಲರಾಗಬೇಕು' ಎಂದು ಪ್ರಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸುಖಬೋಧಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಪುರಭವನದಲ್ಲಿ ರೋಟರಿ ಸೇವಾ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ `ರೋಟರಿ ಸೇವಾ ಉತ್ಸವ - 2013' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ `ರೋಟರಿ ಸೇವಾ ರತ್ನ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.`ಪ್ರತಿಯೊಬ್ಬರೂ ಗುರಿ ಸಾಧನೆಯ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮಾಡುವ ಸೇವೆಯಿಂದ ಮತ್ತೊಬ್ಬರಿಗೆ ಒಳಿತಾಗಲಿ ಎಂಬ ಪ್ರಾರ್ಥನೆಯನ್ನೂ ಮಾಡಬೇಕು. ಇಲ್ಲದಿದ್ದಲ್ಲಿ ನಾವು ಮಾಡುವ ಸೇವೆ ಅಹಂಕಾರಕ್ಕೆ ದಾರಿ ಮಾಡಿಕೊಡಲಿದೆ' ಎಂದು ಹೇಳಿದರು.ಯೋಗ ಭಾರತಿ ಅಧ್ಯಕ್ಷ ಪ್ರೊ.ಎನ್.ವಿ.ರಘುರಾಮ್ `ರೋಟರಿ ಸೇವಾ ಗ್ರಂಥ' ವನ್ನು ಬಿಡುಗಡೆ ಮಾಡಿದರು. ರೋಟರಿಯ ಬದ್ರಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ನಾಗೇಂದ್ರ, ಮಂಜುನಾಥ ಶೆಟ್ಟಿ, ಕೆ.ಪಿ.ನಾಗೇಶ್, ಸಮೂಹ ಸೇವೆ ಜಿಲ್ಲಾ ನಿರ್ದೇಶಕ ಬಿ.ಅಮರನಾಥ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.