ಹೃದಯ ಶಸ್ತ್ರಚಿಕಿತ್ಸೆಯ ನಂತರ..

7

ಹೃದಯ ಶಸ್ತ್ರಚಿಕಿತ್ಸೆಯ ನಂತರ..

Published:
Updated:
ಹೃದಯ ಶಸ್ತ್ರಚಿಕಿತ್ಸೆಯ ನಂತರ..

ಭಾರತದಲ್ಲಿ ಕಾರ್ಡಿಯೋವ್ಯಾಸ್ಕ್ಯುಲಾರ್ ರೋಗವು ಮರಣದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ದೇಶವು ಪ್ರತಿ ವರ್ಷ ಹೃದ್ರೋಗಗಳಿಂದಾಗಿ 30 ಲಕ್ಷ ಮಂದಿಯನ್ನು ಕಳೆದುಕೊಳ್ಳುತ್ತಿದೆ.

ಹೃದ್ರೋಗವನ್ನು ತಡೆಗಟ್ಟಬಹುದು. ಏಕೆಂದರೆ ಅದು ಜೀವನ ಶೈಲಿಯ ರೋಗವಾಗಿದೆ. ನಮ್ಮ ಜೀವನ ಶೈಲಿಯಲ್ಲಿ ಬುದ್ಧಿವಂತ ಬದಲಾವಣೆಗಳು ಅಪಾಯದ ಮಟ್ಟಗಳನ್ನು ಕಡಿಮೆ ಮಾಡಬಲ್ಲವು.ಹೃದಯಾಘಾತವು ಘಟಿಸುವುದನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ, ಶಸ್ತ್ರ-ಚಿಕಿತ್ಸಾ ನಂತರದ ಆರೈಕೆ ಮತ್ತು ಚಿಕಿತ್ಸಾ ನಂತರದ ಅವಧಿಗಳು ರೋಗಿಯ ವಾಸ್ತವಿಕವಾಗಿ ಗಣನೀಯ ಪ್ರಭಾವವನ್ನುಂಟು ಮಾಡಿ ರೋಗವನ್ನು ನಿಯಂತ್ರಿಸಬಹುದಾದ ಹಂತವಾಗಿರುತ್ತದೆ.

ಎರಡನೆಯ ಹೃದಯಾಘಾತವನ್ನು ತಪ್ಪಿಸಲು ಅನೇಕ ಔಷಧೋಪಚಾರಗಳು, ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಆಯ್ಕೆಗಳು ಇದ್ದರೂ ಸಹಾ ಸಮಸ್ಯೆಯು ಬಹುತೇಕವಾಗಿ ರೋಗಿಗಳ ಪ್ರವೃತ್ತಿಯ ಮೇಲೆ ಆಧಾರಗೊಂಡಿರುತ್ತದೆ.

 

ಆರೋಗ್ಯ ಆರೈಕೆ ಸೌಲಭ್ಯಗಳ ಮೇಲೆ ಖರ್ಚು ಮಾಡುವುದರೊಡನೆ, ಪ್ರಾಥಮಿಕ ಗಮನವು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೇಲೆ ಇರಬೇಕು.ಬೊಜ್ಜಿನ ಅಪಾಯ

ಬೊಜ್ಜನ್ನು ನಿಯಂತ್ರಿಸುವುದು ಕೊಲೆಸ್ಟರೊಲ್, ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೊಜ್ಜನ್ನು ಹೊಂದಿರುವುದು ಹೃದಯಾಘಾತದ ನಂತರ ಮರಣ ಉಂಟಾಗುವುದರಲ್ಲಿ ಪ್ರಮುಖ ಅಪಾಯ ಅಂಶವಾಗಿರುತ್ತದೆ.ಅಮೆರಿಕನ್ ಹಾರ್ಟ್ ಜರ್ನಲ್ ನಡೆಸಿದ ಒಂದು ಅಧ್ಯಯನದಲ್ಲಿ, ಹೃದಯಾಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಸುಮಾರು 2000ರೋಗಿಗಳ ಪೈಕಿ ಅತೀವ ತೂಕದ ರೋಗಿಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಮರಣ ಹೊಂದುವ ಸಾಧ್ಯತೆಯನ್ನು 50%ನಷ್ಟು ಹೆಚ್ಚು ಪಡೆದಿದ್ದರು.ದೇಹಕ್ಕೆ ನಿರ್ದಿಷ್ಟ ಪ್ರಮಾಣದ ಕೊಬ್ಬು ಪ್ರತಿದಿನವೂ ಅಗತ್ಯವಿದ್ದರೂ ಸಹಾ, ವಾಸ್ತವಿಕತೆ ಏನೆಂದರೆ ನಾವೆಲ್ಲರೂ ತುಂಬಾ ಕೊಬ್ಬನ್ನು ಸೇವಿಸುತ್ತಿದ್ದೇವೆ. ಅಧಿಕ ಕೊಬ್ಬು ಇರುವ ಆಹಾರವು ನಿಮ್ಮ ರಕ್ತದಲ್ಲಿ ಅಧಿಕಗೊಂಡ ಕೊಬ್ಬಿಗೆ ಕಾಣಿಕೆ ನೀಡಬಹುದು. ಅತೀವ ಕೊಬ್ಬು ಇರುವ ಆಹಾರ ಕ್ರಮ, ಶಸ್ತ್ರಚಿಕಿತ್ಸೆ ಮತ್ತು ಉಪ್ಪು ಹೆಚ್ಚಾಗಿರುವ ಆಹಾರಗಳು ತೂಕದಲ್ಲಿ ಹೆಚ್ಚಳ, ರಕ್ತದೊತ್ತಡವನ್ನು ಅಧಿಕಗೊಳಿಸಬಹುದು; ಕೊಲೆಸ್ಟರೊಲ್ ಮಟ್ಟಗಳನ್ನು ಹೆಚ್ಚಿಸಬಹುದು: ಇವೆಲ್ಲವೂ ಹೃದಯಾಘಾತಕ್ಕೆ ಅಪಾಯಕಾರಿ ಅಂಶಳು.ಕೊಬ್ಬು ಮತ್ತು ಹೃದಯದ ಆರೋಗ್ಯದ ಮೇಲೆ ಪ್ರಭಾವ:*ಸಾಂದ್ರೀಕೃತ (ಸ್ಯಾಚ್ಯುರೇಟೆಡ್) `ಕೆಟ್ಟ~ ಕೊಬ್ಬುಗಳು:

ಈ `ಕೆಟ್ಟ ಕೊಬ್ಬು~ಗಳನ್ನು ತಪ್ಪಿಸಬೇಕು. ಏಕೆಂದರೆ ಅವು ಕೆಟ್ಟ ಕೊಲೆಸ್ಟರೊಲ್ ಅಥವಾ ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್ (ಎಲ್ ಡಿ ಎಲ್) ಮಟ್ಟಗಳನ್ನು ಹೆಚ್ಚಿಸುತ್ತವೆ. ಕಾರ್ಡಿಯೋ ವ್ಯಾಸ್ಕ್ಯುಲಾರ್ ರೋಗಗಳನ್ನು ತಪ್ಪಿಸಲು ಸ್ಯಾಚ್ಯುರೇಟೆಡ್ ಕೊಬ್ಬುಗಳ ಸೇವನೆಯನ್ನು ನಿಯಂತ್ರಣದಲ್ಲಿ ಇರಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂ ಎಚ್ ಒ) ಸಲಹೆ ನೀಡುತ್ತದೆ.ಸ್ಯಾಚ್ಯುರೇಟೆಡ್ ಕೊಬ್ಬಿನ ಆಮ್ಲಗಳನ್ನು ಅಧಿಕವಾಗಿ ಹೊಂದಿರುವ ಕೊಬ್ಬು ಮತ್ತು ಆಹಾರ ಪದಾರ್ಥಗಳು, ಮಾಂಸ, ಹಂದಿಯ ಕೊಬ್ಬು, ತೆಂಗಿನೆಣ್ಣೆ, ಪಾಮ್ ಆಯಿಲ್ ಮತ್ತು ತೆಂಗಿನ ತಿರುಳಿನ ಎಣ್ಣೆ.* ಸಾಂದ್ರೀಕೃತವಲ್ಲದ (ಅನ್ ಸ್ಯಾಚ್ಯುರೇಟೆಡ್) `ಒಳ್ಳೆಯ~ ಕೊಬ್ಬುಗಳು:

 ಸಾಂದ್ರೀಕೃತವಲ್ಲದ ಕೊಬ್ಬುಗಳನ್ನು ಸಾಮಾನ್ಯವಾಗಿ ಸಸ್ಯಾಧಾರಿತ ಮೂಲಗಳಿಂದ ಪಡೆದು ಕೊಳ್ಳಲಾಗುತ್ತದೆ. ಎರಡು ವಿಧವಾದ ಸಾಂದ್ರೀಕೃತವಲ್ಲದ ಕೊಬ್ಬುಗಳು ಇವೆ. ಮಾನೋ ಅನ್ ಸ್ಯಾಚ್ಯುರೇಟೆಡ್ ಮತ್ತು ಪಾಲಿ ಅನ್ ಸ್ಯಾಚ್ಯುರೇಟೆಡ್ ಕೊಬ್ಬುಗಳು.ಪಾಲಿ ಅನ್ ಸ್ಯಾಚ್ಯುರೇಟೆಡ್ ಕೊಬ್ಬುಗಳು ಸಾರಭೂತ (ಎಸೆನ್ಷಿಯಲ್) ಕೊಬ್ಬಿನ ಆಮ್ಲಗಳು, ಒಮೆಗಾ 6 (ಲಿನೋಲಿಕ್ ಆಮ್ಲ) ಮತ್ತು ಒಮೆಗಾ 6 (ಅಲ್ಫಾ ಲಿನೋಲೆನಿಕ್ ಆಮ್ಲ) ಅನ್ನು ಒಳಗೊಂಡಿರುತ್ತದೆ. ಇವುಗಳನ್ನು ಸಾಮಾನ್ಯವಾಗಿ ಆಲಿವ್ ಎಣ್ಣೆ, ಕಡಲೆಕಾಯಿ (ಶೇಂಗಾ), ಕ್ಯಾನೊಲಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಮುಂತಾದ ಸಸ್ಯಾಧಾರಿತ ಆಹಾರಗಳಿಂದ ಹಾಗೂ ಸಾಲ್ಮನ್ ಮತ್ತು ಟ್ಯೂನಾ ಮುಂತಾದ ಕೆಲವು ಮೀನುಗಳಿಂದ ಪಡೆದು ಕೊಳ್ಳಲಾಗುತ್ತದೆ.*ಟ್ರಾನ್ಸ್ ಫ್ಯಾಟ್ಸ್ (ಕೊಬ್ಬು):

 ಟ್ರಾನ್ಸ್ ಫ್ಯಾಟ್ಸ್ (ಅಥವಾ ಟ್ರಾನ್ಸ್ ಫ್ಯಾಟಿ ಆಮ್ಲಗಳು) ಗಳನ್ನು ಅವುಗಳನ್ನು ಹೆಚ್ಚು ಘನವಾಗಿ ಮಾಡಲು ಜನಜನಕವನ್ನು ದ್ರಾವಣ ರೂಪದ ಖಾದ್ಯ ತೈಲಗಳಿಗೆ ಸೇರಿಸುವ ಒಂದು ಕೈಗಾರಿಕಾ ಪ್ರಕ್ರಿಯೆಯಲ್ಲಿ ತಯಾರಿಸಲಾಗುತ್ತದೆ.ಟ್ರಾನ್ಸ್ ಫ್ಯಾಟ್ಸ್‌ಗಳಿಗೆ ಮತ್ತೊಂದು ಹೆಸರು “ಭಾಗಶಃ ಹೈಡ್ರೋಜಿನೇಟೆಡ್ ಎಣ್ಣೆಗಳು”. ಟ್ರಾನ್ಸ್ ಫ್ಯಾಟ್‌ಗಳನ್ನು ಫ್ರೆಂಚ್ ಫ್ರೈ, ಡೋನಟ್, ಪ್ಯಾಸ್ಟ್ರೀ, ಬಿಸ್ಕೆಟ್ಸ್, ಫೀಝಾ ಡೋ ಇತ್ಯಾದಿ ಆಹಾರಗಳಲ್ಲಿ ನೋಡಬಹುದು.ಪ್ರತಿ ದಿನವೂ ಅತ್ಯಂತ ಸಾಮಾನ್ಯವಾಗಿ ಬಳಸುವ ಅಡುಗೆ ಮಾಧ್ಯಮವು ಅಡುಗೆ ತೈಲವಾಗಿರುವುದರಿಂದ, ಸ್ಯಾಚ್ಯುರೇಟೆಡ್ ಕೊಬ್ಬು ಕಡಿಮೆ ಇರುವ ಮತ್ತು ಮಾನೋಸ್ಯಾಚ್ಯುರೇಟೆಡ್ ಕೊಬ್ಬು ಹೆಚ್ಚು ಇರುವ ಆಲಿವ್ ಎಣ್ಣೆ ಅಥವಾ ಕ್ಯಾನೊಲಾ ಎಣ್ಣೆಯನ್ನು ಬಳಸಬೇಕೆಂದು ಸಲಹೆ ಮಾಡಬಹುದು.ಮಾನೋಸ್ಯಾಚ್ಯುರೇಟೆಡ್ ಕೊಬ್ಬುಗಳಿಂದ ಸಂಪದ್ಭರಿತವಾಗಿರುವ ಅಡುಗೆ ಎಣ್ಣೆಗಳು ಉನ್ನತ ತಾಪಮಾನದಲ್ಲಿ ವಿಭಜನೆಗೊಳ್ಳುವುದಿಲ್ಲ ಮತ್ತು ಹೈಡ್ರೋಜಿನೇಟೆಡ್ ಅಥವಾ ಸ್ಯಾಚ್ಯುರೇಟೆಡ್ ಕೊಬ್ಬುಗಳಾಗಿ ಪರಿವರ್ತನೆಗೊಳ್ಳುವುದಿಲ್ಲ.ಹೃದಯಕ್ಕೆ ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ ಕ್ರಮವೆಂದರೆ ಪ್ರೊಟೀನ್ (ಮೀನು ಮತ್ತು ಸಸ್ಯಾಹಾರಿ ಪರ್ಯಾಯಗಳು), ಅನ್ ಸ್ಯಾಚ್ಯುರೇಟೆಡ್ ಕೊಬ್ಬು, ಕಾರ್ಬೋಹೈಡ್ರೇಟ್‌ಗಳು (ಬ್ರೆಡ್ ಮತ್ತು ಪಾಸ್ತಾಗಳಂತಹ ಆಹಾರಗಳು), ಹಣ್ಣುಗಳು ಮತ್ತು ತರಕಾರಿಗಳು ಇವುಗಳನ್ನು ಒಳಗೊಂಡಿರುವ ಸಮತೋಲಿತ ಆಹಾರ. ಅದು ಸ್ಯಾಚ್ಯುರೇಟೆಡ್ ಕೊಬ್ಬು, ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಹೊಂದಿರಬೇಕು.ಹಸಿರು ಎಲೆಗಳ ತರಕಾರಿಗಳು, ತಾಜಾ ಹಣ್ಣುಗಳು, ಓಟ್ಸ್, ಬಾದಾಮಿ ಇತ್ಯಾದಿಗಳನ್ನು ಸೇವಿಸುವುದು ಸಹಾ ಕೊಲೆಸ್ಟರೊಲ್ ಮಟ್ಟಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಆಹಾರ ಕ್ರಮವನ್ನು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಲು ಪ್ರಾರಂಭಿಕ ಬಿಂದು ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಲಘು ವ್ಯಾಯಾಮದ ಬೆಂಬಲ ನೀಡುವುದು ನಿಮ್ಮ ಹೃದಯವನ್ನು ಪರಿಪೂರ್ಣವಾಗಿ ಇರಿಸಿಕೊಳ್ಳಲು ಆದರ್ಶಕರ ಸಂಯೋಜನೆ.ಕಾರ್ಡಿಯೋವ್ಯಾಸ್ಕ್ಯುಲಾರ್ ರೋಗಗಳಿಗೆ ದಾರಿ ಮಾಡಬಹುದಾದ ಅಪಾಯ ಅಂಶಗಳನ್ನು ನಿಯಂತ್ರಿಸುವುದು ಸುರಕ್ಷಿತ ಮತ್ತು ಸುಭದ್ರ ಆರೋಗ್ಯಕರ ಜೀವನದ ದಿಕ್ಕಿನಲ್ಲಿ ಉತ್ತಮ ಪಥವಾಗಿರುತ್ತದೆ.

(ಲೇಖಕರು ಏಷ್ಯನ್ ಹೃದಯ ಸಂಸ್ಥೆಯ ನಿರೋಧಕ ಕಾರ್ಡಿಯಾಲಜಿ ಮತ್ತು ಪುನರ್ವವಸತಿ ಇಲಾಖೆಯ ಮುಖ್ಯಸ್ಥರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry