ಹೆಂಡತಿಗೆ ನಗ್ನ ಮೆರವಣಿಗೆ ಶಿಕ್ಷೆ

7

ಹೆಂಡತಿಗೆ ನಗ್ನ ಮೆರವಣಿಗೆ ಶಿಕ್ಷೆ

Published:
Updated:

ಲಖೀಂಪುರ್ ಖೇರಿ (ಉತ್ತರ ಪ್ರದೇಶ) (ಪಿಟಿಐ): ಯುವತಿಯೊಬ್ಬಳ ಜತೆ ಓಡಿ ಹೋದ ವ್ಯಕ್ತಿಯ ಪತ್ನಿಯನ್ನು ಆ ಯುವತಿಯ ಕುಟುಂಬದವರು ನಗ್ನಗೊಳಿಸಿ ಊರಿನ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಜಿಲ್ಲೆಯ ಇಸಾನಗರ ಪ್ರದೇಶದಲ್ಲಿ ನಡೆದಿದೆ.ಕೃತ್ಯ ನಡೆಸಿರುವ ಚಂದ್ವಾಪುರದ ಹರದ್ವಾರಿ ಲಾಲ್, ಆತನ ಇಬ್ಬರು ಮಕ್ಕಳು ಹಾಗೂ ನೆರೆಯ ಇನ್ನಿಬ್ಬರು ಆರೋಪಿಗಳಾದ ಮಹೇಶ್ ಮತ್ತು ಸೊನೆ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಗುರುತಿಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.ಆರೋಪಿ ಹರದ್ವಾರಿಲಾಲ್ ಮಗಳು ದರ್ಬಾರಿಲಾಲ್ ಎಂಬಾತನ ಜತೆ ಓಡಿಹೋಗಿದ್ದಳು. ಇಬ್ಬರ ಬಗ್ಗೆ ಮಾಹಿತಿ  ಪಡೆಯಲು ಆರೋಪಿಗಳು ದರ್ಬಾರಿಲಾಲ್ ಪತ್ನಿಯನ್ನು ಶುಕ್ರವಾರ ರಾತ್ರಿ ಅಪಹರಿಸಿದ್ದರು. ಪತಿ ಹಾಗೂ ಯುವತಿ ಎಲ್ಲಿದ್ದಾರೆ ಎನ್ನುವುದು ತನಗೆ ತಿಳಿದಿಲ್ಲ ಎಂದು ಮಹಿಳೆ ಹೇಳಿದರೂ, ಅದನ್ನು ಒಪ್ಪದ ಆರೋಪಿಗಳು ಶನಿವಾರ ಬೆಳಿಗ್ಗೆ ಆ ಮಹಿಳೆಯನ್ನು ನಗ್ನವಾಗಿ ಮೆರವಣಿಗೆ ನಡೆಸಿದ್ದಾರೆಂದು ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry