ಹೆಂಬೆರಾಳು, ಅರಷಿಣಗಿ ಗ್ರಾಮಕ್ಕೆ ನುಗ್ಗಿದ ನೀರು

7
ಜಿಲ್ಲೆಯಾದ್ಯಂತ ವ್ಯಾಪಕ ಮಳೆ

ಹೆಂಬೆರಾಳು, ಅರಷಿಣಗಿ ಗ್ರಾಮಕ್ಕೆ ನುಗ್ಗಿದ ನೀರು

Published:
Updated:
ಹೆಂಬೆರಾಳು, ಅರಷಿಣಗಿ ಗ್ರಾಮಕ್ಕೆ ನುಗ್ಗಿದ ನೀರು

ರಾಯಚೂರು: ಜಿಲ್ಲೆಯಲ್ಲಿ ಮೂರ್ನಾ­ಲ್ಕು ದಿನಗಳಿಂದ ವ್ಯಾಪಕ ಮಳೆ ಸುರಿ­ಯುತ್ತಿದ್ದು, ಸೋಮವಾರ ಹಾಗೂ ಮಂಗಳವಾರ ಹೆಚ್ಚಿನ ಮಳೆ ಸುರಿದಿದೆ. ರಾಯಚೂರು ತಾಲ್ಲೂಕು ದೇವಸುಗೂ­ರಲ್ಲಿ ಗರಿಷ್ಠ 67.2 ಮಿ.ಮಿ ಹಾಗೂ ಕನಿಷ್ಠ ಸಿಂಧನೂರಲ್ಲಿ 0.4 ಮಿ.ಮಿ ಮಳೆ ಮಂಗಳವಾರ ಬೆಳಗಿನ ತನಕ ಸುರಿದಿದೆ.ರಾಯಚೂರು ತಾಲ್ಲೂಕಿನ ಹೆಂಬೆ­ರಾಳು ಗ್ರಾಮ, ಅರಿಷಿಣಗಿ ಸೇರಿದಂತೆ ಕೆಲ ಗ್ರಾಮಗಳಿಗೆ ಹಳ್ಳದ ನೀರು ನುಗ್ಗಿ ಗ್ರಾಮಸ್ಥರು ಮಂಗಳವಾರ ಸಂಜೆ ತೊಂದರೆ ಪಟ್ಟರು. ರಾಯಚೂರು ನಗರದ ಸಿಯಾತಲಾಬ್‌, ಬಂಗಿಕುಂಟ, ಮಡ್ಡಿಪೇಟ ಪ್ರದೇಶದಲ್ಲಿ ಜನ ಮಳೆ ನೀರಿನಿಂದ ಸಮಸ್ಯೆ ಎದುರಿಸಿದರು. ಮಂಗಳವಾರ ರಾತ್ರಿಯೂ ಮಳೆ ಸುರರಿಯುತ್ತಿದ್ದರಿಂದ ಜನ ಆತಂಕ ಗೊಂಡಿದ್ದರು. ಹಟ್ಟಿ, ದೇವದುರ್ಗ, ಸಿಂಧನೂರಲ್ಲಿ ಭಾರಿ ಮಳೆ ಸುರಿಯಿತು.ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನವರೆಗೆ ಬಿದ್ದ ಮಳೆ ವಿವರ (ಮಿಲಿ ಮೀಟರ್‌ಗಳಲ್ಲಿ)ಇಂತಿದೆ.

ರಾಯಚೂರು ನಗರ– 0.8 ಮಿ.ಮಿ,  ಯರಗೇರಾ– 13 ಮಿ.ಮಿ, ಯರಮರಸ್–22.7, ಕಲ್ಮಲಾ 13.3, ದೇವಸುಗೂರು–62.2, ಜೇಗರಕಲ್‌–53, ಚಂದ್ರಬಂಡಾ–11, ಮಾನ್ವಿ–8.3, ಮಲ್ಲಟ– 31, ಸಿರವಾರ– 19, ಕುರಕುಂದಾ–11, ಪಾಮನಕಲ್ಲೂರು–14, ಸಿಂಧನೂರು–0.4, ಹೆಡಗಿನಾಳ–15.4, ಜಾಲಿಹಾಳ–10.2, ಜಾಲಹಳ್ಳಿ– 36, ದೇವದುರ್ಗ–5, ಗಲಗ–26, ಗಬ್ಬೂರು–11.2, ಅರಕೇರಾ–27.8, ಲಿಂಗಸುಗೂರು 7.0, ಹಟ್ಟಿ–25 ಮಿ.ಮಿ ಮಳೆ ಸುರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry