ಹೆಚ್ಚಿದ ಅಂತರ್ಜಲ: ರೈತರ ಸಂತಸ

7

ಹೆಚ್ಚಿದ ಅಂತರ್ಜಲ: ರೈತರ ಸಂತಸ

Published:
Updated:

ಹುಣಸಗಿ: ಸಮೀಪದ ವಜ್ಜಲ ಗ್ರಾಮವೆಂದರೇ ಅಂತರ್ಜಲ ಬತ್ತದ ಬುಗ್ಗಿ ಕರೆಯಲಾಗುತ್ತಿತ್ತು. ಆದರೆ ಅಪವಾದ ಎಂಬಂತೆ ಈ ಗ್ರಾಮದ ಸೀಮಾಂತರದಲ್ಲಿ ಕಳೆದ ನಾಲ್ಕು ದಶಕಗಳಿಂದ ಎಲ್ಲಿಯೇ ಕೊಳವೆಬಾವಿ ಕೊರೆಸಿದರೂ ನೀರು ಬೀಳುತ್ತಿರಲಿಲ್ಲ.ಗ್ರಾಮ ಮತ್ತು ಹೊಲಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಭಾಗಗಳಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು ಎಲ್ಲಿಯೂ ನೀರು ಸಿಕ್ಕಿಲ್ಲ.

ಆದರೆ ವಜ್ಜಲದ ಮಲ್ಲನಗೌಡ ಮೇಟಿಗೌಡ್ರ, ಚಂದ್ರಶೇಖರ ಬೋರಮಗುಂಡ, ಚಂದಪ್ಪ ಗಿಂಡಿ, ಮಲ್ಲನಗೌಡ ಅಮಲಿಹಾಳ ಮತ್ತಿತರರು ಜಮೀನಿಗೆ ನೀರಾವರಿ ಮಾಡಲು ಕೊಳವೆಬಾವಿ ಕೊರೆಸಿದ್ದು, ಸುಮಾರು 5 ಅಂಗುಲಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದು, ರೈತರ ಮುಖದಲ್ಲಿ ಸಂತಸ ಕಾಣಿಸಿದೆ.`ನೀರಿನ ತೊಂದರೆಯಿಂದಾಗಿ ಎರಡನೇ ಬೆಳಿ ಹಾಕಲಾದರೇ ತುಂಬಾ ತೊಂದರೆಯಾಗಿತ್ತರೀ, ದೇವರ ಮ್ಯೋಲಾ ಭಾರಾ ಹಾಕಿ ಬೋರ್‌ವೆಲ್ ಹಾಕಿಸಿನಿರೀ. ನಾಲ್ಕು ಬೋರ್ ನೀರ ಬಿದ್ದಾವರಿ. ಅದರಲ್ಲಿ ಎರಡು ಬೋರ್‌ವೆಲ್‌ನಲ್ಲಿ ಕಳೆದ ಒಂದು ವಾರದಿಂದ ಹೆಚ್ಚಿನ ಪ್ರಮಾಣದ ನೀರು ಬಂದು ತನ್ನಿಂದ ತಾನೇ ಬುಗ್ಗಿಯಂತೆ ಹೊರಚೆಲ್ಲುತ್ತಿದೆ' ಎಂದು ಮಲ್ಲನಗೌಡ ಮೇಟಿ ಹೇಳುತ್ತಾರೆ.ಕಳೆದ ಎರಡು ವರ್ಷಗಳ ಹಿಂದೆ ಇದೇ ಮಲ್ಲನಗೌಡ ಅವರ ಹೊಲದ ಬಳಿ ಸಿಡಿಲಿನಿಂದ ಕಲ್ಲಿನ ಅಣಿ(ಖಣಿ)ಯಲ್ಲಿ ನೀರು ಬಿದ್ದು ಸುದ್ದಿಯಾಗಿತ್ತು. `ನಮ್ಮ ಊರಾಗ ನೀರಿನ ಸೆಲೆ ಕಡಿಮೆ ಇತ್ತಂತ ನಮ್ಮ ಹಿರೇರ ಹೇಳಿದ್ದರೀ. ಆದರೂ ಹೊಲದಾಗ 390 ಫೀಟ್ ಹಾಕಿದರೂ ನೀರ ಬರಲಿಲ್ಲ. ಇನ್ನೇನ ಸಾಕು ಎಂದು ಬಿಡವಷ್ಟರಲ್ಲಿ ಇನ್ನೊಂದ ಹತ್ತ ಫೀಟ್ ಹಾಕಮ ಅಂತ ಹಾಕಿದರೆ ಸುಮಾರು 6 ಇಂಚ್‌ನಷ್ಟ ಸಿಹಿ ನೀರ ಬಂದಾವರಿ' ಎಂದು ಸಂತಸದಿಂದ ಹೇಳುತ್ತಾರೆ ಚಂದ್ರಶೇಖರ ಬೊರಮಗುಂಡ. ಇದರಿಂದಾಗಿ ಬೇಸಿಗೆ ಹಂಗಾಮಿಗೆ ನೀರಾವರಿ ಸೌಲಭ್ಯಕ್ಕಾಗಿ ಬಹುತೇಕ ರೈತರು ಕೊಳವೆಬಾವಿ ಮೂಲಕ ನೀರಾವರಿ ಮಾಡಿಕೊಳ್ಳಲು ಈಗಿನಿಂದಲೇ ತಯಾರಿಯಾಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry