ಹೆಚ್ಚಿದ ಫ್ಲೆಕ್ಸ್ ಹಾವಳಿ-ನಗರಸಭೆ ಮೌನ?

7

ಹೆಚ್ಚಿದ ಫ್ಲೆಕ್ಸ್ ಹಾವಳಿ-ನಗರಸಭೆ ಮೌನ?

Published:
Updated:
ಹೆಚ್ಚಿದ ಫ್ಲೆಕ್ಸ್ ಹಾವಳಿ-ನಗರಸಭೆ ಮೌನ?

ಬೀದರ್: ಇದು ಚುನಾವಣಾ ಸಮಯ. ಇದೇ ಕಾರಣಕ್ಕೇ ಸಣ್ಣದೊಂದು ನೆಪ ಸಿಕ್ಕರೂ ಸಹಜವಾಗಿಯೇ ಶುಭಾಶಯ, ಅಭಿನಂದನೆಗಳ ಹರಿವು ಸಹಜ. ಇದರ ಪರಿಣಾಮ, ಈಗ ನಗರದ ಪ್ರಮುಖ ವೃತ್ತಗಳ ಫ್ಲೆಕ್ಸ್‌ಮಯವಾಗಿವೆ.ಮೊದಲು ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದ ಫ್ಲೆಕ್ಸ್‌ಗಳು ಈಗ ಪ್ರತಿ ವೃತ್ತ, ಆಯಕಟ್ಟಿನ ಸ್ಥಳವನ್ನು ಆಕ್ರಮಿಸಿಕೊಂಡಿವೆ. ನಗರದ `ಸೌಂದರ್ಯ'ಕ್ಕೇ ಹೊಸ ರೂಪ ನೀಡುತ್ತಿರುವ ಫ್ಲೆಕ್ಸ್‌ಗಳ ಹಾವಳಿ ಅತಿರೇಕಕ್ಕೆ ಹೋಗುತ್ತಿದ್ದರೂ, ನಗರಸಭೆ ಮಾತ್ರ ಈ ಅಂಶವನ್ನು ಗಣನೆಗೆ ತೆಗೆದುಕೊಂಡಂತಿಲ್ಲ.ಮಾಚಿದೇವ ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣದ ಆಸುಪಾಸು, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ನಗರಸಭೆ ಎದುರಿನ ವೃತ್ತ ಹೀಗೆ ಎಲ್ಲ ವೃತ್ತಗಳಲ್ಲಿ ರಾರಾಜಿಸುವುದು ಇಂಥ ಫ್ಲೆಕ್ಸ್‌ಗಳೇ.  ಜನ್ಮದಿನ, ಜಯಂತ್ಯುತ್ಸವ, ಈದ್ ಶುಭಾಶಯ, ಹಬ್ಬದ ಶುಭಾಶಯ, ಹೊಸ ವರ್ಷದ ಶುಭಾಶಯ ಹೀಗೆ ಫ್ಲೆಕ್ಸ್‌ಗಳಿಗೆ ಬೇಕಿರುವುದು ನೆಪ ಮಾತ್ರ. ವಿವಿಧ ಪಕ್ಷಗಳ ಮುಖಂಡರು, ಅವರ ಹಿಂಬಾಲಕರು, ಟಿಕೆಟ್ ಆಕಾಂಕ್ಷಿಗಳು ಹೀಗೆ ಸ್ಪರ್ಧೆಗೆ ಬಿದ್ದಂತೆ ಫ್ಲೆಕ್ಸ್‌ಗಳ ಮೊರೆ ಹೋಗುತ್ತಿದ್ದಾರೆ.ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮನಸೋಇಚ್ಛೇ ಫ್ಲೆಕ್ಸ್ ಹಾಕಲು ನಿರ್ಬಂಧವಿದ್ದರೂ ಅದು ಜಾರಿಗೆ ಬಂದಂತಿಲ್ಲ. ನಿಯಮದ ಅನುಸಾರ, ಫ್ಲೆಕ್ಸ್ ಹಾಕುವವರು, ಯಾವ ಸ್ಥಳದಲ್ಲಿ ಮತ್ತು ಎಷ್ಟು ದಿನಕ್ಕೆ ಎಂದು ಮೊದಲೇ ತಿಳಿಸಿ ಅನುಮತಿ ಪಡೆಯಬೇಕು. ಅಗತ್ಯ ಶುಲ್ಕವನ್ನುತುಂಬಬೇಕು.ಇದು, ಪೂರ್ಣವಾಗಿ ಪಾಲನೆ ಆಗದಿರುವ ಕಾರಣ ಒಂದುಕಡೆ ನಗರದ ಸೌಂದರ್ಯಕ್ಕೆ ಧಕ್ಕೆ ಆಗುತ್ತಿದ್ದರೆ, ಇನ್ನೊಂದು ಕಡೆ ನಗರಸಭೆಯ ಆದಾಯಕ್ಕೂ ಖೋತಾ ಆಗುತ್ತಿದೆ.ನಗರಸಭೆಆಯುಕ್ತ ರಾಮದಾಸ್ ಅವರನ್ನು ಈ ಕುರಿತು ಸಂಪರ್ಕಿಸಿದರೆ, `ಎರಡು ದಿನದ ಹಿಂದಷ್ಟೇ ನಗರದಲ್ಲಿ ಸುತ್ತು ಹಾಕಿದಾಗ ಈ ಅಂಶ ನನ್ನ ಗಮನಕ್ಕೂ ಬಂದಿದೆ. ಮುಂದಿನ ವಾರ ಇಂಥ ಫ್ಲೆಕ್ಸ್‌ಗಳ ವಿರುದ್ಧ ಆಂದೋಲನ ಆರಂಭಿಸಲಾಗುವುದು' ಎನ್ನುತ್ತಾರೆ.

ನಿಯಮ ಮೀರಿ ಫ್ಲೆಕ್ಸ್ ಹಾಕಿರುವುದು, ಕಡಿಮೆ ಫ್ಲೆಕ್ಸ್‌ಗಳಿಗೆ ಅನುಮತಿ ಪಡೆದು, ಹೆಚ್ಚಿನಫ್ಲೆಕ್ಸ್ ಅಳವಡಿಸುವುದು ಸೇರಿದಂತೆ ಎಲ್ಲ ಅಂಶಗಳನ್ನು ಗಮನಿಸಿ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗುವುದು. ಆಗಲೇ ಫ್ಲೆಕ್ಸ್ ಮುದ್ರಕರಿಗೆ, ಮುದ್ರಣವಾಗುವ ಫ್ಲೆಕ್ಸ್‌ಗಳ ಮಾಹಿತಿ ಒದಗಿಸಲು ಸೂಚಿಸಿ ನೋಟಿಸ್ ನೀಡಲಾಗಿದೆ ಎನ್ನುತ್ತಾರೆ.ಅನುಮತಿ ಪಡೆದ ಅವಧಿಯನ್ನೂ ಮೀರಿ ಫ್ಲೆಕ್ಸ್ ಹಾಕಿರುವ ಪ್ರಕರಣಗಳಲ್ಲಿ ಸಂಘಟಕರಿಗೆ ದಂಡ ವಿಧಿಸಲು ಅವಕಾಶವಿದೆ. ಆದರೆ, ಹೀಗೆ ದಂಡ ವಿಧಿಸಿಲ್ಲ. ಬಹುತೇಕ ಪ್ರಕರಣಗಳಲ್ಲಿ ನಗರಸಭೆ ಸಿಬ್ಬಂದಿಯೇ ಅವಧಿ ಮೀರಿದ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಸುವರು ಎಂದರು.ನಗರಸಭೆ ಇನ್ನಾದರೂ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದರೆ, ನಗರದಲ್ಲಿ ಅನಧಿಕೃತವಾದ            ಫ್ಲೆಕ್ಸ್‌ಗಳ ಹಾವಳಿ ತಡೆಯುವುದರ ಜೊತೆಗೆ, ನಗರಸಭೆಗೆ ಸ್ವಲ್ಪ           ಮಟ್ಟಿಗೆ              ಆದಾಯವನ್ನು ಉತ್ತಮಪಡಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry