ಹೆಚ್ಚಿದ ಬಡವ- ಶ್ರೀಮಂತರ ಅಂತರ

ಶುಕ್ರವಾರ, ಜೂಲೈ 19, 2019
26 °C
ಎಚ್.ಎಸ್.ದೊರೆಸ್ವಾಮಿ ವಿಷಾದ

ಹೆಚ್ಚಿದ ಬಡವ- ಶ್ರೀಮಂತರ ಅಂತರ

Published:
Updated:

ಬೆಂಗಳೂರು: `ದೇಶದಲ್ಲಿ 12ನೇ ಪಂಚವಾರ್ಷಿಕ ಯೋಜನೆ ಜಾರಿಯಲ್ಲಿದ್ದರೂ ಬಡವರು ಬಡವರಾಗಿಯೇ ಉಳಿದಿದ್ದು, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತ್ದ್ದಿದಾರೆ. ಇದರಿಂದ ಇವರಿಬ್ಬರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ' ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ವಿಷಾದಿಸಿದರು.ನಗರದಲ್ಲಿ ಬುಧವಾರ ಕರ್ನಾಟಕ ಶೋಷಿತ ಅಲ್ಪಸಂಖ್ಯಾತರ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.ಬಡವರ ಅಭಿವೃದ್ಧಿಗಾಗಿ 2 ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ಈಗಿನ ಜನಪ್ರತಿನಿಧಿಗಳು ಜನರ ಪ್ರತಿನಿಧಿಗಳಾಗಿ ಉಳಿದಿಲ್ಲ. ಪಕ್ಷಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.ಸಾಹಿತಿ ಶೂದ್ರ ಶ್ರೀನಿವಾಸ್ ಅವರು ಮಾತನಾಡಿ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ದುಡಿದ ದೇವರಾಜ ಅರಸುರಂತಹ ನಾಯಕರು ಈಗ ಇಲ್ಲ. ಅವರ ಸ್ಥಾನವನ್ನು ತುಂಬುವ ಜವಾಬ್ದಾರಿ ಸಂಘಟನೆಗಳ ಮೇಲಿದೆ. ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ಹೋರಾಟ ನಡೆಸುವ ಸಂಘಟನೆಗಳು ಸ್ವಹಿತಾಸಕ್ತಿಯನ್ನು ಬಿಟ್ಟು, ಸಮುದಾಯದ ಏಳಿಗೆಗಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ಕೆಳವರ್ಗದ ಹಾಗೂ ಹಿಂದುಳಿದವರ ಏಳಿಗೆಗೆ ಸಂಘಟನೆಗಳು ಸಹಾಯ ಮಾಡಬೇಕು. ಅಂತಹ ಸಂಘಟನೆಗಳಿಗೆ ಸದಾ ನನ್ನ ಬೆಂಬಲವಿರುತ್ತದೆ ಎಂದು ಹೇಳಿದರು.

ಕೆಲಸಕ್ಕೆ ಬಾರದ ದೇವರ ಭಾವಚಿತ್ರಗಳನ್ನು ಮನೆಯಲ್ಲಿ ಇರಿಸಿ ಪೂಜೆ ಮಾಡುವ ಬದಲು, ದೇಶ ಹಾಗೂ ದೇಶದ ಜನರ ಏಳಿಗೆಗಾಗಿ ದುಡಿದ ಬುದ್ಧ, ಬಸವಣ್ಣ, ಅಂಬೇಡ್ಕರ್‌ರಂತಹ  ಮಹನೀಯರ ಭಾವಚಿತ್ರಗಳನ್ನು ಮನೆಯಲ್ಲಿಟ್ಟುಕೊಳ್ಳಿ. ನಿತ್ಯ ಇಂತಹ ಮಹನೀಯರನ್ನು ನೋಡುವುದರಿಂದ ಅವರ ಆದರ್ಶಗಳನ್ನಾದರೂ ಮೈಗೂಡಿಸಿಕೊಳ್ಳಲು ಅನುಕೂಲವಾಗುತ್ತದೆ.

- ಅಹಿಂದ ಅಧ್ಯಕ್ಷ ಮುಕುಡಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry