ಹೆಚ್ಚಿದ ಶಾಲಾ ದೇಣಿಗೆ: ಪಾಲಕರ ಆತಂಕ

ಸೋಮವಾರ, ಜೂಲೈ 22, 2019
27 °C

ಹೆಚ್ಚಿದ ಶಾಲಾ ದೇಣಿಗೆ: ಪಾಲಕರ ಆತಂಕ

Published:
Updated:

ಸೇಡಂ: ಮಳಖೇಡ ಸುತ್ತಲಿನ ಗ್ರಾಮಗಳ ಮಕ್ಕಳ ಭವಿಷ್ಯ ರೂಪಿಸುವಲ್ಲಿ ರಾಜಶ್ರೀ ಸಿಮೆಂಟ್ ಕಂಪೆನಿಯ ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆ ಒಂದು ವರವಾಗಿದ್ದು ಇದೀಗ ದೊಡ್ಡ ಮೊತ್ತದ ಡೊನೇಶನ್ (ದೇಣಿಗೆ) ಪಾವತಿಗೆ ಸೂಚನೆ ನೀಡಿದ ಪರಿಣಾಮ ಸುತ್ತಲಿನ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.ಈ ಹಿಂದಿನ ಅಧ್ಯಕ್ಷರು ಸ್ಥಳೀಯ ಮತ್ತು ಕಾರ್ಮಿಕರ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುವಲ್ಲಿ ಒಂದು ವ್ಯವಸ್ಥೆ ಕಲ್ಪಿಸಿದ್ದರು. ಭಾರತೀಯ ವಿದ್ಯಾ ಭವನ ವತಿಯಿಂದ ಶಾಲೆ ಆರಂಭದಲ್ಲಿ ದೇಣಿಗೆ ರೂಪದಲ್ಲಿ 5 ಸಾವಿರ ರೂಪಾಯಿಯನ್ನು ಪಡೆಯುತ್ತಿದ್ದರು. ಈ ದೇಣಿಗೆ ಹಣದಲ್ಲಿ ಪ್ರತಿ ವರ್ಷ ಪಾಲಕರಿಗೆ ಭವನದಿಂದ ಉತ್ತಮ ಪುಸ್ತಕಗಳನ್ನು ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.ಆದರೆ, ಪ್ರಸಕ್ತ ಶಾಲೆಗೆ ಪ್ರವೇಶ ಬಯಸುವ ಮಕ್ಕಳಿಗೆ ಪಾಲಕರು 10 ಸಾವಿರ ರೂಪಾಯಿಗಳ ದೇಣಿಗೆ ಪಾವತಿಸಲು ಒತ್ತಡ ಹೇರಿದೆ. ಮೇಲಾಗಿ ವಿವಿಧ ತರಗತಿಗಳಿಗೆ ಕನಿಷ್ಠ ರೂ. 1000 ರಿಂದ 2500, ಅಲ್ಲದೇ ಪ್ರಯೋಗಾಲಯ ಶುಲ್ಕ 500-750, ಸಾರಿಗೆ ವ್ಯವಸ್ಥೆಗಾಗಿ ಮಳಖೇಡದಿಂದ ಶಾಲೆಗೆ ಪ್ರತಿ ತಿಂಗಳು ಕಂಪೆನಿ ನೌಕರರ ಮಕ್ಕಳಿಗೆ 120 ಇತರರಿಗೆ ರೂ.200 ಹೂಡಾ ಗ್ರಾಮದಿಂದ ರೂ. 90-150 ಅಂತರ ನಿಗದಿಗೊಳಿಸಿದೆ.ಪ್ರತಿ ತಿಂಗಳು ವಿವಿಧ ತರಗತಿ ಮತ್ತು ಗುತ್ತಿಗೆದಾರರ, ಸಿಬ್ಬಂದಿ ಮತ್ತು ಕಂಪೆನಿ ಶಾಶ್ವತ ನೌಕರರ ಮಕ್ಕಳಿಗಾಗಿ ಹಣ ಪಾವತಿಸುವ ಅಂತರ ಕಲ್ಪಿಸಿರುವುದು ಯಾವ ನ್ಯಾಯ ಎಂದು ನಮೋ ಬುದ್ದ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೇಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ರಾಜಕುಮಾರ ಎಂ. ಕಟ್ಟಿ ಕಂಪೆನಿ ಅಧ್ಯಕ್ಷ ಎಸ್.ಕೆ. ಗುಪ್ತಾ ಅವರಿಗೆ ಲಿಖಿತ ಮನವಿ ಮೂಲಕ ಗಮನ ಸೆಳೆದಿದ್ದಾರೆ.ವಿಶೇಷ ಶುಲ್ಕ ವಿವಿಧ ತರಗತಿಗಳ ಅನುಗುಣವಾಗಿ ರೂ.300-500 ಪಾವತಿಸಬೇಕು. ಅಲ್ಲದೇ ರೂ. 10 ಸಾವಿರ ಗಳನ್ನು ಠೇವಣಿ ಇಡಬೇಕು. ಈ ಹಣ ಯಾವ ಕಾರಣಕ್ಕೂ ವಾಪಸ್ ನೀಡುವುದಿಲ್ಲ ಎಂದು ಕಂಪೆನಿಯ ಶಾಲೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.ಈ ದಿಸೆಯಲ್ಲಿ ಸುತ್ತಲಿನ ಗ್ರಾಮಸ್ಥರು ಕಂಪೆನಿಯ ಧೋರಣೆಯನ್ನು ಟೀಕಿಸಿದ್ದು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿರುವ ಕಂಪೆನಿ ಕೊನೆ ಪಕ್ಷಕ್ಕೆ ಸುತ್ತಲಿನ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿಯೂ ಸಹ ವಿಫಲವಾಗಿದೆ ಎಂದಿದ್ದಾರೆ. ಕೂಡಲೇ ಕಂಪೆನಿ ಶಾಲೆಯ ಆಡಳಿತ ಮಂಡಳಿ ಶುಲ್ಕ ಮರುಪರಿಶೀಲಿಸಬೇಕು ಎಂದು ಕಟ್ಟಿ ವಿನಂತಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry