ಹೆಚ್ಚಿನ ಅರ್ಜಿ ಶುಲ್ಕ ವಸೂಲಿಗೆ ಆಕ್ಷೇಪ

ಮಂಗಳವಾರ, ಜೂಲೈ 23, 2019
20 °C

ಹೆಚ್ಚಿನ ಅರ್ಜಿ ಶುಲ್ಕ ವಸೂಲಿಗೆ ಆಕ್ಷೇಪ

Published:
Updated:

ಶಿವಮೊಗ್ಗ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹೆಚ್ಚಿನ ಅರ್ಜಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಎನ್‌ಎಸ್‌ಯುಐ ಖಂಡಿಸಿ, ಮಂಗಳವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿತು.ಸರ್ಕಾರಿ ಹಾಗೂ ಖಾಸಗಿ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಪ್ರವೇಶದ ಸಂದರ್ಭದಲ್ಲಿ ವಿತರಿಸುವ ಅರ್ಜಿ ಶುಲ್ಕಕ್ಕೆ ್ಙ 21 ನಿಗದಿ ಮಾಡಿ ಸರ್ಕಾರ ಈ ಬಾರಿ ಅಧಿಕೃತ ಆದೇಶ ಹೊರಡಿಸಿದೆ.ಆದರೆ, ನಗರದ ಡಿಡಿಪಿಯು ಕಚೇರಿ ಹಿಂಭಾಗದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿ ವಿದ್ಯಾರ್ಥಿಗಳು, ಪೋಷಕರಿಂದ ಹಣ ವಸೂಲಿ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಪ್ರಥಮ ವರ್ಷದ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಇನ್ನಿತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಶುಲ್ಕದ ್ಙ 21ಗಳ ಜತೆಗೆ, ಪ್ರಾಸ್ಪೆಕ್ಟಸ್ ಶುಲ್ಕ ಎಂದು ್ಙ 50ನ್ನು ಪಡೆಯಲಾಗುತ್ತಿದೆ. ಒಟ್ಟು ್ಙ 71ಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಯಾವುದೇ ಪರಿಚಯ ಪುಸ್ತಕಗಳನ್ನು ಕೊಡುತ್ತಿಲ್ಲ ಎಂದು ಕಾರ್ಯಕರ್ತರು ದೂರಿದರು.ಅಲ್ಲದೇ, ಕಾಲೇಜಿನಲ್ಲಿ ಆಂತರಿಕ ಪರೀಕ್ಷಾ ಶುಲ್ಕವೆಂದು ತಲಾ ವಿದ್ಯಾರ್ಥಿಯಿಂದ ಕೇವಲ ್ಙ 156 ಪಡೆಯಬೇಕಾದ್ದಲ್ಲಿ, ್ಙ 256ಗಳನ್ನು ಪಡೆಯಲಾಗುತ್ತಿದ್ದು, ಇದು ಕೂಡ ಕಾನೂನುಬಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿದ ಹಣವನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಪದಾಧಿಕಾರಿಗಳಾದ ಸಿ.ಜೆ. ಮಧುಸೂದನ್, ಮೋಹನ್, ಚೇತನ್ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry