ಹೆಚ್ಚಿನ ಉದ್ಯೋಗಾವಕಾಶಕ್ಕೆ ಯೋಜನೆ: ಸ್ನೈಡರ್‌

7
ಬೆಂಗಳೂರಿನಲ್ಲಿ ಸಂಶೋಧನೆ, ಅಭಿವೃದ್ಧಿ ಕೇಂದ್ರ

ಹೆಚ್ಚಿನ ಉದ್ಯೋಗಾವಕಾಶಕ್ಕೆ ಯೋಜನೆ: ಸ್ನೈಡರ್‌

Published:
Updated:

ಬೆಂಗಳೂರು: ಭಾರತದಲ್ಲಿ 50 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಫ್ರಾನ್ಸ್‌ ಮೂಲದ ವಿದ್ಯುತ್‌ ಉಪಕರಣಗಳ ಕಂಪೆನಿ ‘ಸ್ನೈಡರ್‌ ಎಲೆಕ್ಟ್ರಿಕ್‌’, ಉದ್ಯೋ ಗಾವಕಾಶ ಹೆಚ್ಚಿಸಲು ಯೋಜಿಸಿದೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ನೈಡರ್‌ ಎಲೆಕ್ಟ್ರಿಕ್‌ನ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಮ್ಯಾ ನ್ಯುಯಲ್‌, ಭಾರತದ ಮಾರುಕಟ್ಟೆ ಕಂಪೆನಿಗೆ ಬಹಳ ಪ್ರಮುಖ. ಮತ್ತಷ್ಟು ಬಂಡವಾಳ ಹೂಡಿ, ಉದ್ಯೋಗಾವ ಕಾಶ ಹೆಚ್ಚಿಸಲಾಗುವುದು ಎಂದರು.ಸ್ನೈಡರ್‌ ಎಲೆಕ್ಟ್ರಿಕ್‌ ಇಂಡಿಯ ವ್ಯವ ಸ್ಥಾಪಕ ನಿರ್ದೇಶಕ ಅನಿಲ್‌ ಚೌಧರಿ, 2005ರಲ್ಲಿ 15 ಕೋಟಿ ಯೂರೊ (₨855 ಕೋಟಿ) ವಹಿವಾಟು ನಡೆಸಿದ್ದ ಕಂಪೆನಿ, 2013ರಲ್ಲಿ 100 ಕೋಟಿ ಯೂರೊ(₨8445 ಕೋಟಿ) ಲೆಕ್ಕಕ್ಕೆ ಬೆಳೆದಿದೆ. 19ಸಾವಿರ ಉದ್ಯೋಗಾವ ಕಾಶ ಸೃಷ್ಟಿಸಿದೆ ಎಂದು ಹೇಳಿದರು.28 ನಗರಗಳಲ್ಲಿದ್ದ ಕಂಪೆನಿ ಚಟುವ ಟಿಕೆ 52 ನಗರಗಳಿಗೆ ಹೆಚ್ಚಿದೆ. 2014ರ ಅಂತ್ಯದೊಳಗೆ 76 ನಗರಗಳಿಗೆ

ವಿಸ್ತರಿ ಸುವ ಗುರಿ ಇದೆ. ಇನ್ವರ್ಟರ್‌ ಮತ್ತು ಬ್ಯಾಟರಿ ಚಿಲ್ಲರೆ ವಹಿವಾಟು ಮಾರು ಕಟ್ಟೆಯಲ್ಲಿ ಸ್ನೈಡರ್‌

2ನೆೇ  ಸ್ಥಾನದ ಲ್ಲಿದೆ. ಬೆಂಗಳೂರಷ್ಟೇ ಅಲ್ಲ, ರಾಜ್ಯದ 2 ಮತ್ತು 3ನೇಶ್ರೇಣಿ ನಗರಗಳಲ್ಲೂ ಸ್ನೈಡರ್‌ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry