ಭಾನುವಾರ, ಅಕ್ಟೋಬರ್ 20, 2019
22 °C

ಹೆಚ್ಚಿನ ಭದ್ರತೆ ಬಯಸಿದ ಭಾರತ

Published:
Updated:

ಪರ್ತ್ (ಪಿಟಿಐ): ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳ ವೇಳೆ ಕ್ರೀಡಾಂಗಣದ ಬೌಂಡರಿ ಗೆರೆಯ ಬಳಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾವನ್ನು (ಸಿಎ) ಕೋರಿಕೊಳ್ಳುವ ಸಾಧ್ಯತೆಯಿದೆ.   ಎರಡನೇ ಟೆಸ್ಟ್ ಸಂದರ್ಭ ಸಿಡ್ನಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಆಟಗಾರರ ಜೊತೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ತಂಡದ ಆಡಳಿತ ಇಂತಹ ಚಿಂತನೆ ನಡೆಸಿದೆ. ಭದ್ರತೆಯನ್ನು ಹೆಚ್ಚಿಸುವ ಕುರಿತು ಸಿಎ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲು ಭಾರತ ತಂಡದ ಆಡಳಿತ ಮುಂದಾಗಿದೆ ಎಂದು `ಸಿಡ್ನಿ ಮಾರ್ನಿಂಗ್ ಹೆರಾಲ್ಡ್~ ವರದಿ ಮಾಡಿದೆ.

Post Comments (+)