ಗುರುವಾರ , ನವೆಂಬರ್ 14, 2019
19 °C

ಹೆಚ್ಚಿನ ಭೂಮಿ ಬೇಡ- ನೈಸ್

Published:
Updated:

ಬೆಂಗಳೂರು: `ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ನ ನಿರ್ದೇಶನದಂತೆ ನಡೆಸಲಾಗುತ್ತಿದೆ. ಯೋಜನೆಗಾಗಿ 20,193 ಎಕರೆ ಜಾಗವನ್ನು ಹೊರತುಪಡಿಸಿ ಒಂದು ಇಂಚು ಭೂಮಿಯೂ ಬೇಡ' ಎಂದು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್ (ನೈಸ್) ತಿಳಿಸಿದೆ.`ಉದ್ದೇಶಿತ ಕಾಮಗಾರಿಗಾಗಿ ಒಪ್ಪಂದವಾಗಿರುವ ಭೂಮಿಗಿಂತ ಹೆಚ್ಚಿನ ಭೂಮಿಯನ್ನು ನಾವು ಅಪೇಕ್ಷಿಸುತ್ತಿಲ್ಲ. ಈ ವಿಷಯವನ್ನು ನ್ಯಾಯಾಲಯದಲ್ಲೂ ಸ್ಪಷ್ಟವಾಗಿ ತಿಳಿಸಿದ್ದೇವೆ. ಆದರೆ, ಕಂಪೆನಿಯ ವರ್ಚಸ್ಸನ್ನು ಹಾಳು ಮಾಡಲು ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ' ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)