ಮಂಗಳವಾರ, ಏಪ್ರಿಲ್ 20, 2021
29 °C

ಹೆಚ್ಚುತ್ತಿರುವ ಅಪರಾಧ : ಸಿಪಿಐ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ:  ಇತ್ತೀಚಿನ ದಿನಗಳಲ್ಲಿ ಜಾತಿ, ಭಾಷೆ ಕಾರಣಕ್ಕಾಗಿ ಅಪರಾಧಗಳು ಹೆಚ್ಚಾಗಿ ಕಾನೂನು ಮತ್ತು ಸುವ್ಯವಸ್ಥೆ ಹದೆಗೆಡುತ್ತಿದೆ ಎಂದು ತಾಲ್ಲೂಕು ಪೊಲೀಸ್ ವೃತ್ತ ನಿರೀಕ್ಷಕ ಜಿ.ಎಸ್.ಗಜೇಂದ್ರಪ್ರಸಾದ್ ವಿಷಾದ ವ್ಯಕ್ತಪಡಿಸಿದರು.  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿ ಸಿದ್ದ ‘ಕಾನೂನು ಸುವ್ಯವಸ್ಥೆ ಮತ್ತು ಮಹಿಳಾ ಹಕ್ಕುಗಳ ರಕ್ಷಣೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ದೇಶದ ಹೊರಗಿನ ರಕ್ಷಣೆಗೆ ಮಿಲಿಟರಿ ಇದ್ದರೆ ದೇಶದೊಳಗಿನ ರಕ್ಷಣೆಗೆ ಪೊಲೀಸ್ ವ್ಯವಸ್ಥೆ ಇದೆ. ಅಪರಾಧ ತಡೆ ಗಟ್ಟಿ ಸಮಾಜದಲ್ಲಿ ಶಾಂತಿ ಮೂಡಿಸುವುದು ಪೊಲೀಸರ ಮುಖ್ಯ ಕೆಲಸ ಎಂದರು. ವಿದ್ಯಾರ್ಥಿಗಳು ಕೂಡ ವಿನಾ ಕಾರಣ ಪ್ರತಿಭಟನೆ ಮಾಡುವುದು, ಅಪರಾಧಗಳಲ್ಲಿ ತೊಡಗುತ್ತಿರುವುದು ಬಹಳ ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ಯುವ ಶಕ್ತಿ ಈ ದೇಶದ ಸಂಪತ್ತು ಎಂದು ಹೇಳುವಾಗ ವಿದ್ಯಾರ್ಥಿಗಳು ಯುವಕರೇ ಸಮಾಜ ದಲ್ಲಿ ಅಶಾಂತಿ ಉಂಟು ಮಾಡುವ ಕೆಲಸದಲ್ಲಿ ತೊಡಗಿದರೇ ದೇಶದ ಶಕ್ತಿ ಕ್ಷೀಣವಾಗುತ್ತದೆ ಎಂದರು.  ಸಂಚಾರ ನಿಯಮಗಳು ಮತ್ತು ಅದರ ಪಾಲನೆ, ಮಹಿಳೆಯರ ಹಕ್ಕುಗಳ ರಕ್ಷಣೆ ಮತ್ತು ಅವುಗಳ ಸದುಪಯೋಗ, ಸಂಚಾರಿ ನಿಯಮಗಳಿಂದ ಆಗಬಹುದಾದ ತೊಂದರೆಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.  ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜು ಪ್ರಾಂಶುಪಾಲ  ಪ್ರೊ.ಕೆ.ಪಿ.ರಘೋತ್ತಮ್ , ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ, ಸಂಚಾರಿ ನಿಯಮಗಳ ಸಮರ್ಪಕ ಪಾಲನೆ ಯನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸಹ ಪ್ರಾಧ್ಯಾಪಕಿ ನಾಗರತ್ನಮ್ಮ ಸ್ವಾಗತಿಸಿ, ನಿರಂಜನಬಾಬು ರೆಡ್ಡಿ ವಂದಿಸಿದರು. ದೈಹಿಕ ಶಿಕ್ಷಣ ಸಹ ಪ್ರಾಧ್ಯಾಪಕ ಟಿ.ಬಿ.ಮಾದೇಗೌಡ, ಕಾರ್ಯಕ್ರಮ ನಿರೂಪಿಸಿದರು.ಸಹ ಪ್ರಾಧ್ಯಪಕರಾದ ಡಾ.ನಾಗೇಂದ್ರ ಕುಮಾರ್, ಪ್ರತಿಮಾ, ಎಂ.ರವಿ ಕುಮಾರ್, ಪ್ರೇಂಕುಮಾರಿ, ರಾಜೀವ್, ಪಾರ್ವತಿ, ರವಿಕುಮಾರ್, ಪೂರ್ಣಿಮಾ ಎಸ್‌ಎಫ್‌ವೈ  ಅಧ್ಯಕ್ಷ ಹೆಳವರಹುಂಡಿ ಕಿಶೋರ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.