ಮಂಗಳವಾರ, ಜೂನ್ 22, 2021
28 °C
ಬವಣೆ ನೀಗಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ

ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ಕಂಡುಬರುತ್ತಿದ್ದು, ಅಧಿಕಾರಿ­ಗಳು ಜನಪ್ರತಿನಿಧಿಗಳ ಜತೆ ಕೈಜೋಡಿಸಿ ಮೂರು–ನಾಲ್ಕು ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳಿಗೆ ಸೂಚಿಸಿದರು.ಕೂಟಗಲ್ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಜನರು ಅನುಭವಿಸುತ್ತಿರುವ ಮೂಲ ಸಮಸ್ಯೆಗಳ ಅರಿವು ನನಗಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಸಾಕಷ್ಟು ಮುಂಚಿತವಾಗಿ ಕ್ರಿಯಾ ಯೋಜನೆ ರೂಪಿಸಬೇಕು ಎಂದರು.ಇಂಧನ ಸಚಿವರು ಇಡೀ ಜಿಲ್ಲೆ­ಯನ್ನು ನಿರಂತರ ಜ್ಯೋತಿ ಯೋಜನೆಯ ವ್ಯಾಪ್ತಿಗೆ ತರುವ ಯೋಜನೆ ಕೈಗೊಂಡಿ­ದ್ದಾರೆ.  ಜಿಲ್ಲೆಯ ಹೆಚ್ಚುವರಿ ಟ್ರಾನ್ಸ್‌­ಫಾರ್‌ಮರ್‌ಗಳನ್ನು ಅಳವಡಿಸಲು  ಪ್ರತಿ ತಾಲ್ಲೂಕಿಗೆ 1.5 ರಿಂದ 2 ಕೋಟಿ ರೂಪಾಯಿ­ಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ತಿಳಿಸಿದರು.ಸಮಗ್ರ ನೀರಾವರಿ: ಜಿಲ್ಲೆಯ ನೀರಿನ ಬವಣೆಯನ್ನು ಪರಿಗಣಿಸಿ ಸಮಗ್ರ ನೀರಾವರಿ ಯೋಜನೆ­ಗಳನ್ನು ರೂಪಿಸಿ ಜಾರಿಗೊಳಿಸಲು ಸರ್ಕಾರ ಗಂಭೀರ­ವಾಗಿ ಚಿಂತಿಸಿದೆ ಎಂದರು.ಶ್ರೀರಂಗ ಯೋಜನೆಗೆ 6 ರಂದು ಚಾಲನೆ: ಮಾಗಡಿ ತಾಲ್ಲೂಕಿಗೆ ಕುಡಿಯುವ ನೀರು ಕಲ್ಪಿಸುವ  ಶ್ರೀ ರಂಗ ಯೋಜನೆಗೆ ಇದೇ 6 ರಂದು ಮಾಗಡಿ­ಯಲ್ಲಿ ಮುಖ್ಯಮಂತ್ರಿ ಚಾಲನೆ ನೀಡು­ವರು, ಈಗಾಗಲೇ ರೂ 277 ಕೋಟಿ  ಕಾಮಗಾರಿಗೆ ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದರು.ಕಣ್ವ ನಾಲೆಯ ಆಧುನೀಕರಣಕ್ಕೂ ಒತ್ತು ನೀಡಿದ್ದು, ರಾಮನಗರ ತಾಲ್ಲೂಕು ಕಸಬಾ ಹೋಬಳಿಯ ಕುಡಿಯುವ ನೀರಿನ ಯೋಜನೆಗಳಿಗೆ 6 ತಿಂಗಳಲ್ಲಿ ಒಪ್ಪಿಗೆ ನೀಡುವ ಮೂಲಕ ಜಿಲ್ಲೆಯ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ದೊರೆಯುವಂತೆ ಮಾಡುವ ಯೋಜನೆ ಜಾರಿಯಾಗಲಿದೆ ಎಂದರು.ಲಕ್ಷ್ಮೀಪುರ ಗ್ರಾಮ ಪಂಚಾಯತಿ ವ್ಯಾಪ್ತಿ­ಯಲ್ಲಿ ಕುಡಿಯುವ ನೀರಿನ ಘಟಕ­ಗಳನ್ನು ಒದಗಿಸಲಾಗುವುದು. ಗ್ರಾಮ­ದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ವಿಸ್ತರಣೆಗೆ ಗ್ರಾಮಸ್ಥರು ಸಹಕರಿಸಿ ಪಂಚಾಯತಿ ವತಿಯಿಂದ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ ಕೈ ಗೊಳ್ಳು ವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಜನಸಂಪರ್ಕ ಸಭೆಯಲ್ಲಿ ಕೆ.ಎಂ.ಎಫ್ ನಿರ್ದೇಶಕ ಪಿ.ನಾಗರಾಜು, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಎ ಮಂಜುನಾಥ್, ಮುಖಂಡರಾದ ಮರಿದೇವರು, ಎ.ಮಂಜು, ಕಾಂತ ರಾಜು ಪಟೇಲ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.