ಮಂಗಳವಾರ, ಜೂನ್ 22, 2021
29 °C
ಡಾ.ಶಿವಮೂರ್ತಿ ಮುರುಘಾ ಶರಣರು ಕಳವಳ

ಹೆಚ್ಚುತ್ತಿರುವ ಪಂಚಾಂಗ ಅವಲಂಬಿಸುವ ಪ್ರವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ‘ಬದುಕಿನ ಪ್ರತಿಯೊಂದು ಹಂತ ದಲ್ಲಿ ಪಂಚಾಂಗ ಅವಲಂಬಿಸುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿರುವುದು ಕಳಕಳ ಕಾರಿ ಸಂಗತಿಯಾಗಿದೆ’ ಎಂದು  ಚಿತ್ರ ದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಕಳವಳ ವ್ಯಕ್ತ ಪಡಿಸಿದರು.

ಇಲ್ಲಿಯ ಸುಕ್ಷೇತ್ರ ಗಚ್ಚಿನಮಠದಲ್ಲಿ ಬುಧವಾರ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ಆಯೊಜಿಸ ಲಾಗಿದ್ದ ಮೌಢ್ಯದ ನಿವಾರಣೆಯಲ್ಲಿ ಮುಖಂಡರ ಕುರಿತ ವಿಚಾರ ಗೋಷ್ಠಿ ಯನ್ನುದ್ದೇಶಿಸಿ ಅವರು ಮಾತ ನಾಡಿದರು.

'ಆತ್ಮ ವಿಶ್ವಾಸದ ಕೊರತೆಯ ಕಾರಣ ಸಮಾಜದಲ್ಲಿ ಇಂತಹ  ಅಭ್ಯಾಸ ಬೆಳೆ ಯುತ್ತಿದೆ, ವಿಜ್ಞಾನ ಬೆಳೆದಂತೆ ಮನುಷ್ಯ ಪ್ರಗತಿಪರ ಚಿಂತನೆಗಳನ್ನು ರೂಢಿಸಿಕೊಳ್ಳ ಬೇಕಾಗಿತ್ತು, ಆದರೆ ಇದೇ ವಿಜ್ಞಾನವನ್ನು ಮುಂದಿಟ್ಟುಕೊಂಡು ಕೆಲ ಸ್ವಾರ್ಥ ಶಕ್ತಿಗಳು ಸಮಾಜವನ್ನು ಮೌಡ್ಯದ ತೆಕ್ಕೆಗೆ ತಳ್ಳುತ್ತಿವೆ ಎಂದು ವಿಷಾದಿಸಿದರು, ಜಗತ್ತಿನ ಕೆಲವು ಗ್ರಂಥಗಳು ತಮ್ಮ ಧರ್ಮವನ್ನು ಆಧಾರವಾಗಿಟ್ಟುಕೊಂಡು ಸಮಾಜದ ಮಧ್ಯೆ ಅಂತರ ಸೃಷ್ಟಿಸಿರಬಹುದು, ಆದರೆ ಧರ್ಮ ನಿರಪೇಕ್ಷತೆ ಸಾರುವ ನಮ್ಮ ಸಂವಿಧಾನ ಮಾತ್ರ ಈ ಗ್ರಂಥಗಳಿಗೆ ತದ್ವಿರುದ್ಧ ವಾಗಿದೆ,ಎಲ್ಲ ಧರ್ಮಗಳನ್ನು ಜಾತ್ಯತೀತ ನೆಲೆಗಟ್ಟಿನ ಮೇಲೆ ಒಟ್ಟಾಗಿ ಮುನ್ನಡೆಸಿ ಕೊಂಡು ಹೋಗುವ ಅಂಶ ಸಂವಿಧಾನ ದಲ್ಲಿ ಮಾತ್ರ ಕಾಣಸಿಗುತ್ತದೆ, ಮುಂದಿನ ಪ್ರಧಾನಿಯಾರಾಗಬೇಕು ಎಂಬ ಚರ್ಚೆ ಇಲ್ಲಿ ಪ್ರಸ್ತುತವಲ್ಲ, ಸಂವಿಧಾನದ ಮೂಲ ಆಶಯಕ್ಕೆ ತಕ್ಕಂತೆ ದೇಶವನ್ನು ಮುನ್ನಡೆ ಸುವಂಥ ಸಮರ್ಥ ವ್ಯಕ್ತಿ ಪ್ರಧಾನಿಯಾಗ ಬೇಕೆನ್ನುವುದು ತಮ್ಮ ನಿಲುವು ಎಂದರು.

ಮೋಟಗಿ ಮಠಾಧೀಶ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಜನರ ಮುಗ್ದತೆಯನ್ನು ಬಂಡವಾಳ ಮಾಡಿಕೊಂಡು ಭಾವನೆಗಳ ಜತೆ ಚೆಲ್ಲಾಟವಾಡುವ ನಯವಂಚಕರನ್ನು ಸಮಾಜದಿಂದ ಬಹಿಷ್ಕರಿಸಬೇಕು ಎಂದು ಹೇಳಿದರು.ಇಂದು ನಮಗೆ ಕಹಿಯಾದ ಸತ್ಯಕ್ಕಿಂತ ಸಿಹಿಯಾದ ಮಿಥ್ಯ ಹೆಚ್ಚು ಪ್ರಿಯವಾಗುತ್ತಿದೆ,ಇದು ತಾತ್ಕಾಲಿಕವೆಂದು ಗೊತ್ತಿದ್ದರೂ, ಸಿಹಿಯಾದ ಮಿಥ್ಯದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.