ಹೆಚ್ಚುತ್ತಿರುವ ವೃದ್ಧಾಶ್ರಮ: ಕಳವಳ

7

ಹೆಚ್ಚುತ್ತಿರುವ ವೃದ್ಧಾಶ್ರಮ: ಕಳವಳ

Published:
Updated:

ಜನವಾಡ: ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ್‌ ಅಷ್ಟೂರು ಹೇಳಿದರು.ಬೀದರ್‌ ತಾಲ್ಲೂಕಿನ ಕೊಳಾರ(ಬಿ) ಗ್ರಾಮದಲ್ಲಿ ಬುಧವಾರ ನಡೆದ ಕರ್ನಾಟಕ ಪದವಿಪೂರ್ವ ಮಹಾ­ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ಪಾಲಕರು ಮತ್ತು ಮಕ್ಕಳ ನಡುವೆ ಅಂತರ ಹೆಚ್ಚುತ್ತಿದ್ದು, ಅನೇಕ ಮಕ್ಕಳು ತಮ್ಮ ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿ­ಸುತ್ತಿದ್ದಾರೆ. ಗುರು–ಹಿರಿಯರ ಬಗೆಗಿನ ಗೌರವವೂ ಕಡಿಮೆಯಾಗುತ್ತಿದೆ ಎಂದು ಹೇಳಿದರು.ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ಮಕ್ಕಳಲ್ಲಿ ಮಾನವೀಯ ಗುಣ, ಸೇವಾ ಮನೋಭಾವ ಬೆಳೆ­ಯುತ್ತದೆ. ವ್ಯಕ್ತಿತ್ವ ವಿಕಸನ­ಗೊಳ್ಳುತ್ತದೆ. ಇಂಥ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಪಾಲಕರು, ಗುರು–ಹಿರಿ­ಯರನ್ನು ಗೌರವದಿಂದ ಕಾಣುತ್ತಾರೆ ಎಂದರು.ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗ­ಬೇಕು ಎನ್ನುವುದನ್ನು ಈಗಲೇ ನಿರ್ಧರಿ­ಸಬೇಕು. ಅದರ ಸಾಕಾರಕ್ಕಾಗಿ ಪ್ರಯ­ತ್ನಿಸಬೇಕು ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಶೆಟಕಾರ್‌ ಹೇಳಿದರು.ಎನ್‌ಎಸ್‌್ಎಸ್‌ ಸಂಯೋಜನಾ­ಧಿಕಾರಿ ಡಾ. ಬಸವರಾಜ ಬಲ್ಲೂರು ಪ್ರಾಸ್ತಾವಿಕ­ವಾಗಿ ಮಾತನಾಡಿದರು.

ಪ್ರೊ. ಆರ್‌.ಎಂ. ನಂದಿ, ಡಾ. ಎಸ್‌.ವಿ. ಜೂಜಾ, ಪ್ರಮುಖರಾದ ರುಕ್ಮೊದ್ದೀನ್‌, ಮಾರುತಿ ಮೇತ್ರೆ, ರೇವಣಪ್ಪ ಚಿಲ್ಲರ್ಗಿ, ಪದ್ಮಾಕರ ಕಲವಾಡಿ, ಶಾಂತಕುಮಾರ್‌, ಜಗ­ನ್ನಾಥ ಕಮಲಾಪುರೆ ಇದ್ದರು.ಕೊಡಂಬಲದ ಗುರುಸ್ವಾಮಿ, ಶಿವ­ಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿ­ಕೊಟ್ಟರು. ಪ್ರಾಚಾರ್ಯ ಡಾ. ಬಿ.ಎಸ್‌. ಬಿರಾದಾರ್‌ ಸ್ವಾಗತಿಸಿದರು. ಸಚಿನ­ಕುಮಾರ್‌ ವಿಶ್ವಕರ್ಮ ನಿರೂಪಿಸಿದರು. ಗಣೇಶ ತೋರೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry