ಹೆಚ್ಚುವರಿ ಕೊಠಡಿ ನಿರ್ಮಾಣ: ಭರವಸೆ

6

ಹೆಚ್ಚುವರಿ ಕೊಠಡಿ ನಿರ್ಮಾಣ: ಭರವಸೆ

Published:
Updated:
ಹೆಚ್ಚುವರಿ ಕೊಠಡಿ ನಿರ್ಮಾಣ: ಭರವಸೆ

ಕೃಷ್ಣರಾಜಪುರ: ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ  ರೂ 35 ಲಕ್ಷ ವೆಚ್ಚದಲ್ಲಿ 5 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಅವುಗಳನ್ನು  ಕಾಲಮಿತಿಯೊಳಗೆ ಪೂರ್ಣ ಗೊಳಿಸಲಾ­ಗುವುದು ಎಂದು ಶಾಸಕ ಬೈರತಿ ಎ.ಬಸವರಾಜ್‌ ಭರವಸೆ ನೀಡಿದರು.ಮಳೆ ನೀರು ನುಗ್ಗಿ ಸಮಸ್ಯೆ ಎದುರಿಸುತ್ತಿರುವ ಕೃಷ್ಣರಾಜಪುರ ವಾರ್ಡ್ 26 ವ್ಯಾಪ್ತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.ಭವಿಷ್ಯದಲ್ಲಿ ಅವ್ಯವಸ್ಥೆ ಎದುರಾಗದಂತೆ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷರು ಎಚ್ಚರ ವಹಿಸಬೇಕು. ಸರ್ಕಾರಿ ಶಾಲೆಗೆ ಬಡ, ಮಧ್ಯಮ ವಗರ್ದವರ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಅವರ ಹಿತ ಕಾಪಾಡಲು ಶಿಕ್ಷಕರು ಶ್ರಮಿಸಬೇಕು ಎಂದು ಅವರು ಸೂಚಿಸಿದರು.ರಾಜ್ಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಸಹಾಯಕ ನಿರ್ದೇಶಕ ಶಶಿಧರ ಮೊರಾಬಾದ್, ಬಿಬಿಎಂಪಿ ಜಂಟಿ ಆಯುಕ್ತ ದೇವರಾಜ್, ಮುಖ್ಯ ಎಂಜಿನಿಯರ್‌ ಮುನಿ ಕೃಷ್ಣಪ್,ಕ್ಷೇತ್ರ ಶಿಕ್ಷಣ ಅಧಿಕಾರಿ ನಂಜುಂಡಯ್ಯ ,ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry