ಶುಕ್ರವಾರ, ಜೂನ್ 18, 2021
22 °C

ಹೆಚ್ಚುವರಿ ಬಸ್ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಸಕ್ತ ವರ್ಷದಲ್ಲಿ  250 ಸಾಮಾನ್ಯ ನಮೂನೆಯ ಬಸ್, 10 ಪರಿಸರ ಸ್ನೇಹಿ ಪುಷ್ಪಕ್,  27 ವೋಲ್ವೊ ಹಾಗೂ 6 ಕರೋನ ಬಸ್ ಸೇವೆಯನ್ನು ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ ಪ್ರಾರಂಭಿಸಲಿದೆ.ಸಂಸ್ಥೆ ಪ್ರಾರಂಭಿಸಲಿರುವ ಹೊಸ ಮಾರ್ಗಗಳ ವಿವರ ಇಲ್ಲಿದೆ.ಶಿವಾಜಿನಗರ ಬಸ್ ನಿಲ್ದಾಣ- ಬಂಡೆನಲ್ಲಸಂದ್ರಕ್ಕೆ (ಮಾರ್ಗ ಸಂಖ್ಯೆ 362ಕೆ)- ಮಾರ್ಗ- ಮೆಯೋಹಾಲ್, ಆಡುಗೋಡಿ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬಂಡೆನಲ್ಲಸಂದ್ರಕ್ಕೆಚಿಕ್ಕಲಸಂದ್ರ ಬಸ್ ನಿಲ್ದಾಣ-  ಎಲೆಕ್ಟ್ರಾನಿಕ್ ಸಿಟಿ ( ಮಾರ್ಗ ಸಂಖ್ಯೆ 378ಎಂ )-ಮಾರ್ಗ- ಉತ್ತರಹಳ್ಳಿ, ಗೊಟ್ಟಿಗೆರೆ, ಬೆಟ್ಟದಾಸನಪುರ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ.ಬನಶಂಕರಿ- ಯಶವಂತಪುರ ಬಸ್ ನಿಲ್ದಾಣ (ಮಾರ್ಗ ಸಂಖ್ಯೆ 410ಎಂ)- ಮಾರ್ಗ- ಪಿ.ಇ.ಎಸ್ ಕಾಲೇಜು ನಾಯಂಡ ಹಳ್ಳಿ, ನಾಗರಬಾವಿ ಸರ್ಕಲ್, ಸುಮ್ಮನ ಹಳ್ಳಿ, ಗೊರಗುಂಟೆ ಪಾಳ್ಯ, ಮಾರ್ಗವಾಗಿ ಯಶವಂತಪುರ ಬಸ್ ನಿಲ್ದಾಣಎಚ್‌ಎಎಲ್- ಮಾರತ್ತಹಳ್ಳಿ(ಮಾರ್ಗಸಂಖ್ಯೆ 329ಎಂ ) ಮಾರ್ಗ- ವರ್ತೂರು, ಮುತ್ತಸಂದ್ರ.ಇಂದು ಬಸ್ ದಿನ

ಬಿಎಂಟಿಸಿಯು ಮಾರ್ಚ್ 5ರಂದು ಬಸ್ ದಿನವನ್ನಾಗಿ ಆಚರಿಸುತ್ತಿದ್ದು, ಈ ಬಾರಿ ನಗರದ ಕೆಳಕಂಡ  ಪ್ರಮುಖ ರಸ್ತೆಗಳನ್ನು ಆಯ್ದುಕೊಳ್ಳಲಾಗಿದೆ.ಹಳೆ ವಿಮಾನ ನಿಲ್ದಾಣ ರಸ್ತೆ(ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ , ತುಮಕೂರು ರಸ್ತೆ, ಬಳ್ಳಾರಿ ರಸ್ತೆ,  ಥಣಿಸಂದ್ರ ರಸ್ತೆ   ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆಯಲ್ಲಿ ಬಸ್ ಹೆಚ್ಚುವರಿ ಸೇವೆ ಒದಗಿಸಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.