ಹೆಚ್ಚುವರಿ ವೈದ್ಯಕೀಯ ಸೀಟಿಗೆ ನಾಳೆಯಿಂದ ಕೌನ್ಸೆಲಿಂಗ್‌

7

ಹೆಚ್ಚುವರಿ ವೈದ್ಯಕೀಯ ಸೀಟಿಗೆ ನಾಳೆಯಿಂದ ಕೌನ್ಸೆಲಿಂಗ್‌

Published:
Updated:

ಬೆಂಗಳೂರು: ಸರ್ಕಾರಿ ಕೋಟಾ ಅಡಿ ಉಳಿದಿರುವ ಒಟ್ಟು 93 ವೈದ್ಯಕೀಯ ಸೀಟುಗಳಿಗೆ ಇದೇ 17ರಿಂದ 19ರವರೆಗೆ ವಿದ್ಯಾರ್ಥಿಗಳು ಆದ್ಯತೆ ಗುರುತಿಸ­ಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ ತಿಳಿಸಿದರು.ಬೆಂಗಳೂರಿನಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ 20ರಂದು ಸೀಟು ಹಂಚಿಕೆ ನಡೆ ಯಲಿದೆ. ಸೀಟು ಪಡೆದುಕೊಂಡ ವಿದ್ಯಾ ರ್ಥಿಗಳು 24ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳಬೇಕು’ ಎಂದರು.93 ಸೀಟುಗಳ ಪೈಕಿ ಗುಲ್ಬರ್ಗದ ಇಎಸ್‌ಐನಲ್ಲಿ 42, ಬೆಂಗಳೂರಿನ ಇಎಸ್‌ಐನಲ್ಲಿ 7, ಅಖಿಲ ಭಾರತ ಕೋಟಾ ಅಡಿ ಖಾಲಿ ಉಳಿದಿರುವ 40 ಸೀಟುಗಳೂ ಸೇರಿವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry