ಹೆಚ್ಚುವರಿ ಶುಲ್ಕ ಮರುಪಾವತಿಗೆ ಆಗ್ರಹ

7

ಹೆಚ್ಚುವರಿ ಶುಲ್ಕ ಮರುಪಾವತಿಗೆ ಆಗ್ರಹ

Published:
Updated:

ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ಮತ್ತು ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ಪಡೆದಿರುವ ಶುಲ್ಕವನ್ನು ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ದಾವಣಗೆರೆ ವಿದ್ಯಾರ್ಥಿ ಸೇನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸೇನೆಯ ಜಿಲ್ಲಾ ಸಂಚಾಲಕ ಶಿವಪ್ರಸಾದ್ ಕುರುಡಿ ಮಠ್ ಮಾತನಾಡಿ, 2011 ಸೆಪ್ಟೆಂಬರ್‌ನಲ್ಲಿ ಪ್ರಥಮ ವರ್ಷದ ಎಂಸಿಎ ಮತ್ತು ಎಂಬಿಎಯ ಒಟ್ಟು 77 ವಿದ್ಯಾರ್ಥಿಗಳಿಂದ ತಲಾ ್ಙ 53,590 ಶುಲ್ಕವನ್ನು ವಿವಿ ಕಟ್ಟಿಸಿಕೊಂಡಿದೆ. ಆದರೆ, ಅದೇ 2012ರಲ್ಲಿ ಇದೇ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಂದ ್ಙ 23,590 ಮಾತ್ರ ಶುಲ್ಕ ಕಟ್ಟಿಸಿಕೊಂಡಿದೆ. ಹೆಚ್ಚುವರಿ ಪಾವತಿಸಿದ್ದ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಹೇಳಲಾಗಿತ್ತು.ಆದರೆ, ಈಗ ವಿವಿ ಮರುಪಾವತಿ ಮಾಡಲು ಅಸಾಧ್ಯ ಎನ್ನುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ್ಙ 30 ಸಾವಿರ ಹೆಚ್ಚುವರಿ ಶುಲ್ಕ ಹೊರೆಯಾಗುತ್ತದೆ. ಯುಬಿಡಿಟಿ ಸರ್ಕಾರಿ ಕಾಲೇಜಾಗಿದೆ. ಈ ವಿಷಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ, ಕೂಡಲೇ, ಶುಲ್ಕ ಮರುಪಾವತಿಗೆ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ನಂತರ ವಿದ್ಯಾರ್ಥಿಗಳು ವಿಟಿಯು ವಿರುದ್ಧ ಘೋಷಣೆ ಕೂಗಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಕೆ.ಎಚ್. ಪ್ರವೀಣ್, ಎಚ್.ಕೆ. ಶಿವಕುಮಾರ್, ಶ್ರೀಧರ್, ಆಸಿಫ್, ಸಂಕೇತ್, ಕೆ.ಟಿ. ಸುಷ್ಮಾ, ವೀಣಾ, ಸುನಿತಾ, ಬಕ್ಕೇಶ್ ರೋಣದ್, ಸೌಮ್ಯಾ, ಅಬು ಖಲಂದರ್, ಖುರ್ ಖಾನ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry