ಹೆಚ್ಚುವರಿ ಸೌಲಭ್ಯ- ಮಿತ ಆಯ್ಕೆ: ಮಾರುತಿ

7

ಹೆಚ್ಚುವರಿ ಸೌಲಭ್ಯ- ಮಿತ ಆಯ್ಕೆ: ಮಾರುತಿ

Published:
Updated:

ಬೆಂಗಳೂರು: `ಎ-ಸ್ಟಾರ್', ವ್ಯಾಗನ್-ಆರ್, `ಆಮ್ನಿ ಡಿಲಕ್ಸ್' ಮತ್ತು ಆಲ್ಟೊ ಕೆ10 ಸರಣಿಯಲ್ಲಿ ಹೆಚ್ಚುವರಿ ಸೌಲಭ್ಯಗಳನ್ನೊಳಗೊಂಡ ವಿಶೇಷ ಕಾರುಗಳನ್ನು ಸೀಮಿತ ಆಯ್ಕೆ ಅವಕಾಶ ದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಮಾರುತಿ ಸುಜುಕಿ ಇಂಡಿಯ(ಎಂಎಸ್‌ಐ) ತಿಳಿಸಿದೆ.`ಎ-ಸ್ಟಾರ್ ಆಕ್ಟೀವ್' 13 ಬಗೆಯ ಹೊಸ ಸೌಲಭ್ಯ ಹೊಂದಿದೆ. ರೂ. 23,000 ಬೆಲೆಯ ಈ ಸೌಲಭ್ಯಗಳು ರೂ. 14,000ಕ್ಕೆ ದೊರೆಯುತ್ತಿವೆ. `ವ್ಯಾಗನ್-ಆರ್ ಪ್ರೊ' ಮಾದರಿಗೆ ಹೊಸದಾಗಿ 11 ಸೌಲಭ್ಯಗಳನ್ನು ಸೇರಿಸಲಾಗಿದ್ದು, ರೂ. 30,000 ಬೆಲೆಯವು ರೂ. 20,000ಕ್ಕೆ ಲಭ್ಯವಾಗಲಿವೆ.`ಆಲ್ಟೊ ಕೆ10 ನೈಟ್‌ರೇಸರ್' ಮಾದರಿಯಲ್ಲಿಯೂ 11 ಮೌಲ್ಯವರ್ಧಿತ ಸೇವೆಗಳನ್ನು ಸೇರಿಸಲಾಗಿದೆ. ರೂ. 25,000ರ ಈ ಸೌಲಭ್ಯಗಳು ರೂ. 13,490ಕ್ಕೆ ದೊರೆಯಲಿವೆ. `ಆಮ್ನಿ ಡಿಲಕ್ಸ್'ನಲ್ಲಿಯೂ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸಲಾಗಿದೆ. ಈ ಎಲ್ಲ ಕಾರುಗಳೂ ಸೀಮಿತ ಸಂಖ್ಯೆಯಲ್ಲಿ ಲಭ್ಯವಿವೆ ಎಂದು `ಎಂಎಸ್‌ಐ' ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry